ಮಂಗಳೂರಿನ ಕುಖ್ಯಾತ ಕ್ರಿಮಿನಲ್ಸ್​​ ಪಿಂಕಿ ನವಾಜ್, ಶರಣ್​ ಮೇಲೆ ಗೂಂಡಾ ಕಾಯ್ದೆ; ಹೈಕೋರ್ಟ್ ಸಮ್ಮತಿ!

dfsdsdfsdfsdf
Published on

ದಕ್ಷಿಣ ಕನ್ನಡ: ಮಂಗಳೂರಿನ ಕುಖ್ಯಾತ ಕ್ರಿಮಿನಲ್​ಗಳಾಗಿರುವ ಪಿಂಕಿ ನವಾಜ್ ಮತ್ತು ಆಕಾಶ ಭವನ ಶರಣ್ ಮೇಲೆ ಮಂಗಳೂರು ನಗರ ಪೊಲೀಸರು ಹಾಕಿರುವ ಗೂಂಡಾ ಕಾಯ್ದೆಗೆ ಹೈಕೋರ್ಟ್ ಸಮ್ಮತಿ ಸೂಚಿಸಿದೆ.

ಹತ್ಯೆ, ಕೊಲೆ ಯತ್ನ, ದರೋಡೆ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಪಿಂಕಿ ನವಾಜ್ ಮತ್ತು ಆಕಾಶಭವನ ಶರಣ್‌ನನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದರು. ಈ ಇಬ್ಬರ ಮೇಲೆ ಗೂಂಡಾ ಕಾಯ್ದೆ ಹಾಕುವ ಪ್ರಸ್ತಾವನೆಯನ್ನು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಡಿದ್ದರು.

ಬಳಿಕ ಆರೋಪಿಗಳ ಮೇಲೆ ಗೂಂಡಾ ಕಾಯ್ದೆ ಹಾಕುವಂತೆ ರಾಜ್ಯ ಗೃಹ ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿತ್ತು. ಅದಕ್ಕೀಗ ರಾಜ್ಯ ಹೈಕೋರ್ಟ್ ಒಪ್ಪಿಗೆ ನೀಡಿದೆ. ಗೂಂಡಾ ಕಾಯ್ದೆಗೆ ಒಪ್ಪಿಗೆ ಸಿಕ್ಕ ಬಳಿಕ ಇಬ್ಬರನ್ನು ಒಂದು ವರ್ಷದವರೆಗೆ ನ್ಯಾಯಾಂಗ ಬಂಧನದಲ್ಲಿಯೇ ಇರಿಸುವಂತೆ ರಾಜ್ಯ ಗೃಹ ಇಲಾಖೆ ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net