

ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಅರೆಯೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಸುರೇಶ್ ಗೌಡ, ಗೌರಿಶಂಕರ್ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಸ್ಫೋಟಕ ಹೇಳಿಕೆ ನೀಡಿದ್ದರು. 'ನನ್ನ ಕೊಲೆ ಮಾಡಿಸೋದಿಕ್ಕೆ ನೀನು ಸಜ್ಜಾಗಿದ್ದೀಯಾ. ನನ್ನನ್ನು ಕೊಲ್ಲಲು ಜೈಲಲ್ಲಿ ಇರೋರಿಗೆ ಸುಪಾರಿ ಕೊಡ್ತೀಯಾ...' ಎಂದು ಹೇಳಿ ರಾಜ್ಯದಲ್ಲೇ ಸಂಚಲನ ಸೃಷ್ಟಿಸಿದ್ದರು.
ಇದೀಗ ಮಾಜಿ ಶಾಸಕನ ವಿರುದ್ಧ ತುಮಕೂರು ಎಸ್.ಪಿಗೆ ಶಾಸಕ ಗೌರಿಶಂಕರ್ ದೂರು ನೀಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ತುಮಕೂರು ಗ್ರಾಮಾಂತರ ಕ್ಷೇತ್ರದ ಅರೆಯೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ 'ಶಾಸಕ ಗೌರಿಶಂಕರ್ ನನ್ನ ಕೊಲೆಗೆ ರೌಡಿಶೀಟರ್ ಒಬ್ಬನಿಗೆ 5 ಕೋಟಿಗೆ ಸುಪಾರಿ ನೀಡಿದ್ದಾರೆ' ಎಂದು ಬಹಿರಂಗವಾಗಿ ವೇದಿಕೆ ಮೇಲೆ ಗೌರಿಶಂಕರ್ ವಿರುದ್ದ ಗಂಭೀರ ಆರೋಪ ಮಾಡಿದ್ದರು. ಸುರೇಶ್ ಗೌಡ.