ರಾಮನಗರ ಶಾಸಕ ಸಿಡಿ ರಿಲೀಸ್ ವಿಚಾರ; ಪಾಪ ರೀ.. ಆತ ಸಂಭಾವಿತ ಮನುಷ್ಯ: ಸಚಿವ ಕೆ.ಎನ್. ರಾಜಣ್ಣ

WhatsApp Image 2024-05-01 at 1.28.55 PM
Published on

ಬಾಗಲಕೋಟೆ: ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಲೈಂಗಿಕ ದೌರ್ಜನ್ಯದ ಪ್ರಕರಣ ರಾಷ್ಟ್ರವ್ಯಾಪಿ ಸದ್ದು ಮಾಡುತ್ತಿದ್ದಂತೆ ಇದೀಗ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಸಿಡಿ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಸಹಕಾರ ಸಚಿವ ಕೆ.ಎನ್. ರಾಜಣ್ಣ ಮಾತನಾಡಿ, ಹರಿದಾಡುತ್ತಿರುವ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಇಂದು ಬಾಗಲಕೋಟೆಯಲ್ಲಿ ಮಾತನಾಡಿದ ಸಹಕಾರ ಸಚಿವ ಕೆ.ಎನ್. ರಾಜಣ್ಣ, ಸ್ಟುಡಿಯೋಗೆ ಬರ್ತೆನೆ, ಎಲ್ಲ ವಿಡಿಯೋ ಕಾಪಿಗಳನ್ನೂ ತಗೊಂಡು ಬಂದು ಮಾತಾಡ್ತೇನೆ ಎಂದರು. ಶಾಸಕ ಇಕ್ಬಾಲ್ ಹುಸೇನ್, ಡಿಸಿಎಂ ಡಿಕೆಶಿ ಆಪ್ತ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಹಾಗಾದ್ರೆ ನಾನು ಡಿಕೆಶಿ ಅಪ್ತನೇ. ನಂದೂ ಒಂದು ಸಿಡಿ ಇರಬೇಕು ಬನ್ನಿ, ಎಲ್ಲಾ ಒಟ್ಟಿಗೆ ನೋಡೋಣ" ಎಂದು ಹಾಸ್ಯಸ್ಪದವಾಗಿ ಹೇಳಿದರು.

"ರಾಮನಗರ ಶಾಸಕ ಪಾಪ ಸಂಭಾವಿತ ವ್ಯಕ್ತಿ. ಮಕ್ಕಳ ಸಮಾನರಾದ ಹೆಣ್ಣುಮಕ್ಕಳ ಜೊತೆ ನಾವು ಆತ್ಮೀಯತೆಯಿಂದ ಮಾತನಾಡ್ತೀವಿ, ಅದಕ್ಕೆ ಸಂಬಂಧ ಕಟ್ಟಿಬಿಟ್ಟರೆ ಹೇಗೆ? ಈ ರಾಮನಗರ ಶಾಸಕ ಅವರ ಆಪ್ತ ಸ್ನೇಹಿತರೊಂದಿಗೆ ಸಲಿಗೆಯಿಂದ ಮಾತಾಡಿದ್ದಾರೆ ಅಂತಾ ನೀವು ಹೇಳ್ತಿದ್ದೀರಾ, ಆದರೆ ಅದನ್ನು ನಾನು ನೋಡಿಲ್ಲ, ಕೇಳಿಲ್ಲ. ನಾನು ಹೇಳೋದು ಏನಂದ್ರೆ, ಯಾರೇ ಆಗಲಿ ನಾವು ನೋಡುವ ದೃಷ್ಟಿಕೋನದ ಮೇಲೆ ಹೋಗುತ್ತದೆ" ಎಂದರು.

"ಚಿಕ್ಕ ಹೆಣ್ಣುಮಕ್ಕಳು ಬಂದಾಗ ಆಶೀರ್ವಾದ ಮಾಡೋಕೆ ತಲೆ ಮುಟ್ಟಿದ್ರೆ, ಅದಕ್ಕೆ ರಾಜಣ್ಣ ಹೆಣ್ಣುಮಕ್ಕಳನ್ನೇ ಮುಟ್ಟಿದ್ದಾನೆ ಅಂದ್ರೆ ಏನು ಹೇಳೋದು?" ಎಂದರು. ಇನ್ನು ಪ್ರಜ್ವಲ್ ರೇವಣ್ಣ ಮಾದರಿಯ ಸಿಡಿ ಇದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ನೋಡಿ ಅನಾಗರಿಕ ರೀತಿಯ ಕ್ಲಿಪಿಂಗ್ಸ್​ಗಳು ಅವು. ಅದನ್ನು ತಗೊಂಡು ಹೋಗಿ, ಪಾಪ ರಾಮನಗರ ಶಾಸಕನಿಗೆ ಯಾಕೆ ಹೋಲಿಸ್ತೀರಿ" ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net