ನಿಮಗೆ ಸ್ವಲ್ಪವಾದರೂ ಮಾನವೀಯತೆ ಇದೆಯೇ? ಸಿಎಂ ವಿರುದ್ಧ ಆರ್​. ಅಶೋಕ ವಾಗ್ದಾಳಿ

WhatsApp Image 2024-05-01 at 12.17.09 PM
Published on

ಬೆಂಗಳೂರು: ಬರದಿಂದ ರಾಜ್ಯದ ರೈತರು ಕೆಂಗೆಟ್ಟಿದ್ದು, ಹೈನುಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಪರಿಹಾರ ಹಣ ಕೊಟ್ಟಿಲ್ಲ ಎಂಬ ವಿಷಯವನ್ನು ಮುಂದಿಟ್ಟು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ ವಿಪಕ್ಷ ನಾಯಕ ಆರ್. ಅಶೋಕ, ನಿಮಗೆ ಸ್ವಲ್ಪವಾದರೂ ಮಾನವೀಯತೆ ಇದೆಯೇ? ಎಂದು ಸಿಎಂ ಸಿದ್ದರಾಮಯ್ಯರನ್ನು ಪ್ರಶ್ನಿಸಿದ್ದಾರೆ.

"ಚುನಾವಣೆ ಬಂದರೆ ಸಾಕು ನಂದಿನಿ ಹೆಸರಿನಲ್ಲಿ ರಾಜಕೀಯ ಮಾಡುವ ಕಾಂಗ್ರೆಸ್,​ ಕಳೆದ 7 ತಿಂಗಳಿನಿಂದ ಹೈನುಗಾರರಿಗೆ ನಯಾ ಪೈಸೆ ಪ್ರೋತ್ಸಾಹ ಧನ ನೀಡಿಲ್ಲ. ಈ ಭೀಕರ ಬರಗಾಲದಲ್ಲಿ ರೈತರ ಗಾಯದ ಮೇಲೆ ಬರೆ ಎಳೆದಂತೆ, ರೈತರಿಗೆ ನೀಡಬೇಕಾದ 700 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದೀರಲ್ಲ ಸಿಎಂ ಸಿದ್ದರಾಮಯ್ಯನವರೇ, ನಿಮಗೆ ಕೊಂಚವಾದರೂ ಮಾನವೀಯತೆ ಇದೆಯೇ?" ಎಂದು ಪ್ರಶ್ನಿಸಿದ್ದಾರೆ.

"ನಿಮಗೆ ರಾಜ್ಯದ ಆರ್ಥಿಕ ನಿರ್ವಹಣೆ ಮಾಡಲು ಸಾಧ್ಯವಾಗದಿದ್ದರೆ, ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ರೈತರನ್ನು ಪದೇ ಪದೇ ಸಂಕಷ್ಟಕ್ಕೆ ದೂಡುತ್ತಿರುವ ನಿಮ್ಮ ಸರ್ಕಾರದಿಂದ ರೈತರು ಬೇಸತ್ತು ಹೋಗಿದ್ದಾರೆ" ಎಂದು ಎಕ್ಸ್​ನಲ್ಲಿ (ಈ ಹಿಂದಿನ ಟ್ವಿಟರ್​) ಬರೆದು, ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net