More

    ಬೆಲೆ ಏರಿಕೆ, ಶೂನ್ಯ ಸಾಧನೆಯೇ ಕಾಂಗ್ರೆಸ್ ಸರ್ಕಾರದ‌ ಕೊಡುಗೆ: ಬಿ.ವೈ.ವಿಜಯೇಂದ್ರ ಟೀಕೆ

    ಬೆಂಗಳೂರು: ಗ್ಯಾರಂಟಿ ಯೋಜನೆಗಳನ್ನೇ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಎಂದು ಕಾಂಗ್ರೆಸ್ ಸರ್ಕಾರ ಬಿಂಬಿಸುತ್ತಿದೆ. ಆದರೆ ಬೆಲೆಗಳ ಏರಿಕೆ, ಶೂನ್ಯ ಸಾಧನೆಯೇ ಒಂದು ವರ್ಷದ ಕೊಡುಗೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು.

    ಪಕ್ಷದ ರಾಜ್ಯ ಕಚೇರಿಯಲ್ಲಿ ಸೋಮವಾರ ಕರೆದ ಸುದ್ದಿಗೋಷ್ಢಿಯಲ್ಲಿ ಕಾಂಗ್ರೆಸ್ ಸರ್ಕಾರದ ಒಂದು ವರ್ಷದ ವೈಫಲ್ಯಗಳನ್ನು ವಿವರಿಸಿದ ಅವರು, ನಿಚ್ಚಳ ಬಹುಮತ ನೀಡಿದ ಜನರು ಸಾಕಷ್ಟು ನಿರೀಕ್ಷೆಯಿಟ್ಟಿದ್ದರು. ಕಳೆದ ಒಂದು ವರ್ಷದ ಯಾವುದೇ ಒಂದು ಹೊಸ ಯೋಜನೆಗೆ ಚಾಲನೆ, ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿಲ್ಲ ಎಂದು ವಾಗ್ದಾಳಿ ಮಾಡಿದರು.

    ಸರ್ಕಾರದ ವೈಫಲ್ಯ, ಕಾರ್ಯವೈಖರಿ ಬಗ್ಗೆ ಟೀಕೆ-ಟಿಪ್ಪಣಿ ಜತೆಗೆ ರಚನಾತ್ಮಕ ಸಲಹೆ ನೀಡುವುದು ಪ್ರತಿಪಕ್ಷದ ಕರ್ತವ್ಯ. ಆದರೆ ಸಿಎಂ ಆದಿಯಾಗಿ ಎಲ್ಲ ಸಚಿವರು, ಕಾಂಗ್ರೆಸ್ ಶಾಸಕರು ಅಭಿವೃದ್ಧಿಯಲ್ಲಿ ದೇಶಕ್ಕೆ ಮಾದರಿ, ಅಸಾಧ್ಯವಾದದ್ದು ಸಾಧ್ಯವಾಗಿಸಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಜನರ ಭಾವನೆ, ನಾಡಿಮಿಡಿತ, ಕುಂದು- ಕೊರತೆ ಅರಿತುಕೊಳ್ಳುವಲ್ಲಿ ಮುಗ್ಗರಿಸಿದ್ದನ್ನು ಮರೆಮಾಚುತ್ತಿದ್ದಾರೆ ಎಂದು ಆಕ್ಷೇಪಿಸಿದರು.

    ಕೇಂದ್ರದ ಜತೆಗೆ ಸಂಘರ್ಷ

    ಕೇಂದ್ರ ಸರ್ಕಾರದ ಜತೆಗೆ ಸಂಘರ್ಷದ ಹಾದಿ ಹಿಡಿಯುವ ಹೊಸ ಪ್ರಯೋಗವನ್ನು ಸಿಎಂ, ಡಿಸಿಎಂ, ಸಚಿವರು, ಸರ್ಕಾರ ಮಾಡಿದೆ. ಬರ ಪರಿಹಾರ ನಿರ್ವಹಣೆ, ರೈತರ ಸಂಕಷ್ಟಕ್ಕೆ ಸ್ಪಂದಿಸುವ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡಿ ತೋರಿಸಿದೆ ಎಂದು ವ್ಯಂಗ್ಯವಾಡಿದರು.

    ಅಭಿವೃದ್ಧಿ ಸ್ಥಗಿತ, ಕಾನೂನು ಮತ್ತು ಸುವ್ಯವಸ್ಥೆ ಕುಸಿತದಿಂದ ಬಂಡವಾಳ ಹೂಡಿಕೆದಾರರು ಹಿಂಜರಿತ. ಮಹಿಳೆಯರಿಗೆ ಅಸುರಕ್ಷತೆ ಭಯ, ರೈತರ ಬಗ್ಗೆ ಅಸಡ್ಡೆ, ಬೆಲೆಗಳ ಏರಿಕೆ ಹೀಗೆ ವೈಫಲ್ಯಗಳ ಕೊಡುಗೆ ದೊಡ್ಡದಿದೆ. ಬರ ಪರಿಹಾರ ನಿರ್ವಹಣೆಯಲ್ಲಿ ಸರ್ಕಾರದ ನಡವಳಿಕೆ ಅಕ್ಷಮ್ಯ ಅಪರಾಧವಾಗಿದೆ ಎಂದು ಬಿ.ವೈ.ವಿಜಯೇಂದ್ರ ವಾಗ್ದಾಳಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts