

ವಿಜಯವಾಣಿ ಸುದ್ದಿಜಾಲ ಶಿರ್ವ
ಜ್ಞಾನವನ್ನು ನಮ್ಮಿಂದ ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಇನ್ನೂ ಹೆಚ್ಚಿನ ಜ್ಞಾನ ಪಡೆಯಲು ವಿದ್ಯಾರ್ಥಿಗಳು ಇಂತಹ ಪ್ರಾಜೆಕ್ಟ್‌ಗಳಲ್ಲಿ ಭಾಗವಹಿಸಬೇಕು ಎಂದು ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ಹೇಳಿದರು.
ಬಂಟಕಲ್ಲು ಶ್ರೀ ಮಧ್ವ ವಾದಿರಾಜತಾಂತ್ರಿಕ ಮಹಾವಿದ್ಯಾಲಯದ ಸಹ ಪಠ್ಯೇತರ ಕೋಶ, ಹವ್ಯಾಸಿ ಪ್ರಾಜೆಕ್ಟ್ ಕ್ಲಬ್, ಐಎಸ್‌ಟಿಇ ವಿದ್ಯಾರ್ಥಿ ಘಟಕ ಮತ್ತು ಇನ್‌ಸ್ಟಿಟ್ಯೂಟ್ ಇನ್ನೋವೇಶನ್ ಕೌನ್ಸಿಲ್ ಸಹಯೋಗದೊಂದಿಗೆ ಟೆಕ್ನಿಕಲ್ ಪ್ರಾಜೆಕ್ಟ್ ಐಡಿಯೇಶನ್ ವಿಷಯದಡಿ ಮಿನಿ ಪ್ರಾಜೆಕ್ಟ್ ಸ್ಪರ್ಧೆ ಮತ್ತು ಪ್ರದರ್ಶನದಲ್ಲಿ ಇತ್ತೀಚೆಗೆ ಮಾತನಾಡಿದರು.
ಸಂಸ್ಥೆಯ ಹಳೇ ವಿದ್ಯಾರ್ಥಿ, ಬೆಂಗಳೂರು ಎಪಿಕಾ ಸಂಸ್ಥೆಯ ಸಾಫ್ಟ್‌ವೇರ್ ಇಂಜಿನಿಯರ್ ಭಾರ್ಗವ ರಾಮ್ ಉಡುಪ ಉದ್ಘಾಟಿಸಿದರು. ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳು ಒಟ್ಟು 66 ಪ್ರಾಜೆಕ್ಟ್ ಪ್ರದರ್ಶಿಸಿದರು. 6 ಪ್ರಾಜೆಕ್ಟ್ ಅನ್ನು ಅತ್ಯುತ್ತಮ ಪ್ರಾಜೆಕ್ಟ್ ಎಂದು ಆಯ್ಕೆ ಮಾಡಿ ನಗದು ಬಹುಮಾನ ನೀಡಲಾಯಿತು.
ಉಪಪ್ರಾಂಶುಪಾಲ ಡಾ.ಗಣೇಶ್ ಐತಾಳ್, ಡೀನ್‌ಗಳು, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಈ ಪ್ರಾಜೆಕ್ಟ್ ಪ್ರದರ್ಶನಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಸಂಸ್ಥೆಯ ಸಹ ಪಠ್ಯೇತರ ಚಟುವಟಿಕೆ ಸಂಯೋಜಕ ಡಾ.ರೆನಿಟಾ ಶರೋನ್ ಮೋನಿಸ್ ಕಾರ್ಯಕ್ರಮ ಸಂಯೋಜಿಸಿ, ವಿದ್ಯಾರ್ಥಿನಿ ಧನ್ಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.