ಮೆಡಿಕವರ್ಡ್ ಫ್ಯಾಮಿಲಿ ಕಾರ್ಡ್

Family Card
Published on

ಬೆಂಗಳೂರು: ನಗರದ ಮೆಡಿಕವರ್ ಆಸ್ಪತ್ರೆ ವತಿಯಿಂದ ‘ಮೆಡಿಕವರ್ಡ್ ಫ್ಯಾಮಿಲಿ ಕಾರ್ಡ್’ ಬಿಡುಗಡೆ ಮಾಡಲಾಗಿದ್ದು, ವೈಟ್ ಫಿಲ್ಡ್ ವಿಭಾಗದ ಎಸಿಪಿ ರೀನಾ ಸುವರ್ಣ ಅವರು ಶುಕ್ರವಾರ ಸೇವೆಗೆ ಚಾಲನೆ ನೀಡಿದರು.

ಸಿಂಗಯ್ಯನ ಪಾಳ್ಯದಲ್ಲಿರುವ ಎಸಿಪಿ ಕಚೇರಿಯಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ‘ಮೆಡಿಕವರ್ಡ್ ಫ್ಯಾಮಿಲಿ ಕಾರ್ಡ್’ ಬಿಡುಗಡೆ ಮಾಡಲಾಯಿತು. ಈ ವೇಳೆ ಮೆಡಿಕವರ್ ಆಸ್ಪತ್ರೆಯ ಮುಖ್ಯಸ್ಥ ಎನ್. ನವೀನ್, ಆಸ್ಪತ್ರೆಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರೋಹಿತ್ ಶರ್ಮಾ ಇತರರು ಇದ್ದರು.

ಮೆಡಿಕವರ್ಡ್ ಕಾರ್ಡ್‌ನ ಬೆಲೆ 500 ರೂ. ಇದ್ದು, ಒಂದು ವರ್ಷವ ವ್ಯಾರಂಟಿ ಹೊಂದಿರುತ್ತದೆ. ಹಣ ಕೊಟ್ಟು ನೋಂದಣಿ ಮಾಡಿದವರ ವಿಳಾಸಕ್ಕೇ ಹತ್ತು ದಿನಗಳ ಒಳಗೆ ಕಾರ್ಡ್ ತಲುಪಲಿದೆ. ಈ ಕಾರ್ಡ್ ಬಳಕೆದಾರರಿಗೆ ಆಸ್ಪತ್ರೆಯಲ್ಲಿ ಶೇ. 25 ರಿಂದ 50 ರಿಯಾಯತಿ ದರದಲ್ಲಿ ಚಿಕಿತ್ಸೆ ದೊರೆಯಲಿದೆ. ಜೊತಗೆ ಆಸ್ಪತ್ರೆಯ ಹತ್ತು ಕಿ.ಮೀ. ವ್ಯಾಪ್ತಿಯಲ್ಲಿ ಇರುವವರಿಗೆ ಉಚಿತ ಆ್ಯಂಬುಲೆನ್ಸ್ ಸೇವೆ ನೀಡಲಾಗುವುದು ಎಂದು ಆಸ್ಪತ್ರೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net