

ಸುಬ್ರಹ್ಮಣ್ಯ: ವಿಶ್ವ ವಿಖ್ಯಾತ ಮೈಸೂರು ದಸರಾದ ಅಂಗವಾಗಿ ಶನಿವಾರ ಮೈಸೂರಿನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯ 12ರಿಂದ 14ವರ್ಷದ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಗುತ್ತಿಗಾರಿನ ಅಮರ ಯೋಗ ಕೇಂದ್ರದ ವಿದ್ಯಾರ್ಥಿನಿ ದೀಕ್ಷಾ ಎಲಿಮಲೆ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದಿದ್ದಾರೆ.
10ರಿಂದ 12ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ನಿಹಾನಿ ವಾಲ್ತಾಜೆ 5ನೇ ಸ್ಥಾನ ಮತ್ತು ಹವೀಕ್ಷಾ ಎಸ್.ಆರ್. 6ನೇ ಸ್ಥಾನ ಗಳಿಸಿದ್ದಾರೆ. ಗೌರಿತಾ. ಕೆ.ಜಿ., ಜಿಶಾ.ಕೊರಂಬಡ್ಕ, ಅದ್ವಿತ್ ವಾಲ್ತಾಜೆ, ಮಣಿಪ್ರಕಾಶ್ ಕಡೋಡಿ, ಹನಿಕ್ಷಾ.ಕೆ.ಎ., ತನುಷ್ ಕಡೋಡಿ. ಭಾಗವಹಿಸಿದ್ದು ಪ್ರಶಂಸಾ ಪತ್ರ ಪಡೆದಿದ್ದಾರೆ. ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.