ವಿಟ್ಲದ ಇಕೋ-ಬ್ಲಿಸ್ ಕೈಗಾರಿಕಾ ಘಟಕಕ್ಕೆ ಭೇಟಿ

Bel_Eco

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಗುರುವಾಯನಕೆರೆ ವಿದ್ಯಾಸಾಗರ ಕ್ಯಾಂಪಸ್‌ನಲ್ಲಿರುವ ಎಕ್ಸೆಲ್ ಪದವಿ ಪೂರ್ವ ವಿದ್ಯಾಸಂಸ್ಥೆ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ವಿಟ್ಲದ ಮೂರ್ಕಜೆಯಲ್ಲಿರುವ ಇಕೋ-ಬ್ಲಿಸ್ ಕೈಗಾರಿಕಾ ಘಟಕಕ್ಕೆ ಭೇಟಿ ನೀಡಿದರು.

ಇಕೋ-ಬ್ಲಿಸ್ ಸಂಸ್ಥೆ ಮುಖ್ಯಸ್ಥ, ಸಿ.ಇ.ಒ ರಾಜಾರಾಂ ಬಲಿಪಗುಳಿ ಮಾತನಾಡಿ, ಮನಸ್ಸಿನ ಇಚ್ಛಾಶಕ್ತಿಯಿಂದ ಒಬ್ಬ ವ್ಯಕ್ತಿ ಕೈಗಾರಿಕಾ ಕ್ಷೇತ್ರದಲ್ಲಿ ಮಹತ್ತರವಾದ ಬೆಳವಂಒಗೆ ಕಾಣಲು ಸಾಧ್ಯವಿದೆ. ಉದ್ಯೋಗ ಸೃಷ್ಠಿಸುವಲ್ಲಿ ನಾನಾ ಆಲೋಚನೆ ಹೊಂದಲಾಯಿತು. ಪ್ರಸ್ತುತವಾಗಿ ಸ್ವತಂತ್ರ ಉದ್ಯಮಗಳಿಂದ ಸ್ಥಳೀಯವಾಗಿ ಉದ್ಯೋಗ ಅವಕಾಶ ಕಲ್ಪಿಸುವುದರೊಂದಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ವದೇಶಿ ಉತ್ಪನ್ನ ಸದ್ದುಮಾಡುತ್ತಿದೆ.

ಝೀರೋ ವೆಸ್ಟ್ ಎಂಬ ಉದ್ದೇಶವನ್ನಿಟ್ಟುಕೊಂಡು ಮುಂದುವರಿದ ಈ ಸಂಸ್ಥೆ ಅಡಕೆ ಹಾಳೆಯಿಂದ ಸುಮಾರು 60 ವಿಧದ ವಸ್ತುಗಳನ್ನು ತಯಾರಿಸಿ ವಿದೇಶಗಳಿಗೆ ರಫ್ತು ಮಾಡುತ್ತಿದ್ದೇವೆ. ಇದೀಗ ಪ್ರಕೃತಿ ಪೂರಕವಾಗಿರುವ ವಸ್ತುಗಳನ್ನು ತಯಾರಿಸುವ ಹೊತ್ತಿಗೆ ಗ್ರಾಮೀಣ ಭಾಗದಲ್ಲಿ 450 ಕ್ಕೂ ಹೆಚ್ಚಿನ ಜನರಿಗೆ ನೇರವಾಗಿ ಉದ್ಯೋಗ ನೀಡಲಾಗಿದೆ. ಇದರೊಂದಿಗೆ 1000 ಕ್ಕೂ ಅಧಿಕ ಮಂದಿಗೆ ಪರೋಕ್ಷವಾದ ಉದ್ಯೋಗ ಅವಕಾಶಗಳು ಸೃಷ್ಟಿಯಾಗಿದೆ. ಇದರಿಂದ ಗ್ರಾಮಗಳ ಜನರ ಆದಾಯ , ಜೀವನಕ್ರಮ ಸುಧಾರಿಸಿದೆ ಎಂದರು.

ವಾಣಿಜ್ಯ ವಿಭಾಗದ ಡೀನ್ ಸಂತೋಷ್ ಕೆ.ಕೆ., ವಿಭಾಗ ಮುಖ್ಯಸ್ಥ ಪ್ರಸನ್ನ, ರವಿ, ಎಕ್ಸೆಲ್ ಮೀಡಿಯಾ ನಿರ್ವಾಹಕ ರಂಜಿತ್ ಭಾಗವಹಿಸಿದ್ದರು.

Share This Article

Alcohol In Winter: ಚಳಿಯಲ್ಲಿ ಮದ್ಯ ಸೇವನೆ ಎಷ್ಟು ಅಪಾಯಕಾರಿ ಗೊತ್ತಾ?

Alcohol In Winter: ಚಳಿಗಾಲ ಆರಂಭವಾಗಿದೆ ಮತ್ತು ತಾಪಮಾನವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಲ್ಲದೆ, ಜ್ವರ…

ಚಳಿಗಾಲದಲ್ಲಿ ಸೀಬೆಹಣ್ಣನ್ನು ಹೇಗೆ ತಿಂದರೆ ಆರೋಗ್ಯಕ್ಕೆ ಪ್ರಯೋಜನಕಾರಿ; ಇಲ್ಲಿದೆ ಉಪಯುಕ್ತ ಮಾಹಿತಿ | Health Tips

ಸೀಬೆಹಣ್ಣು ತಿನ್ನುವುದರಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು. ತಲೆಯಿಂದ ಕಾಲ್ಬೆರಳು ಉಗುರುಗಳವರೆಗೆ ಆರೋಗ್ಯಕರವಾಗಿರಲು ಇದು ಕಿತ್ತಳೆಗಿಂತ ಹೆಚ್ಚು…

ಕಾಂತಿಯುತ ತ್ವಚೆ ನಿಮ್ಮದಾಗಬೇಕೇ?; ಮಲಗುವ ಮುನ್ನ ಈ ಟಿಪ್ಸ್​ ಫಾಲೋ ಮಾಡಿ | Health Tips

ಸುಂದರ, ಆಕರ್ಷಣಿಯ ಮತ್ತು ಹೊಳೆಯುವ ಚರ್ಮವನ್ನು ಪಡೆಯಲು ಹಗಲಿನಲ್ಲಿ ಮಾತ್ರವಲ್ಲ ರಾತ್ರಿ ವೇಳೆಯು ಚರ್ಮದ ಕಾಳಜಿ…