

ಕೋಲಾರ: ಕಟ್ಟುಮಸ್ತಾದ ಯುವಕನೊಬ್ಬ ಸಾವಿಗೆ ಶರಣಾದ ಪ್ರಕರಣವೊಂದು ನಡೆದಿದೆ. ಕೋಲಾರ ಜಿಲ್ಲೆಯಲ್ಲಿ ನಡೆದಿರುವ ಈ ದುರ್ಘಟನೆ ಇದೀಗ ಹಲವಾರು ಅನುಮಾನಗಳನ್ನು ಹುಟ್ಟುಹಾಕಿದೆ.
ಕೋಲಾರ ಜಿಲ್ಲೆಯ ಜಯನಗರ ಬಡಾವಣೆಯ ಯಶವಂತ್ (21) ಎಂಬಾತ ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಮನೆಯಲ್ಲೇ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.
ಇತ್ತೀಚೆಗೆ ರಾಜಧಾನಿ ಬೆಂಗಳೂರಿನಲ್ಲಿ ಮೊದಲ ವರ್ಷದ ಎಂಬಿಎ ಕೋರ್ಸ್ಗೆ ದಾಖಲಾಗಿದ್ದ ಯಶವಂತ್, ದೈಹಿಕ ಕಸರತ್ತಿನ ಮೂಲಕ ಕಟ್ಟುಮಸ್ತಾದ ಮೈಕಟ್ಟು ಹೊಂದಿದ್ದ. ಅದಾಗ್ಯೂ ಮಾನಸಿಕವಾಗಿ ಗಟ್ಟಿತನ ತಾಳದೆ ಸಾವಿಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ಕಾರಣ ಏನು ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ಕೋಲಾರ ನಗರ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.