More

    ಕೆನಡಾದಲ್ಲಿ ಕನ್ನಡ ಮಾತು: ಚಂದ್ರ ಆರ್ಯರಿಗೆ ಭಾರಿ ಬೆಂಬಲ; ಹಿಂಬಾಲಕರ ಸಂಖ್ಯೆಯಲ್ಲಿ ಹೆಚ್ಚಳ…

    ಬೆಂಗಳೂರು: ಕೆನಡಾ ಸಂಸತ್ತಿನಲ್ಲಿ ಪ್ರಪ್ರಥಮ ಬಾರಿಗೆ ಕನ್ನಡ ಕಹಳೆ ಮೊಳಗಿಸಿ ಒಂದೇ ದಿನದಲ್ಲಿ ಜಗದ್ವಿಖ್ಯಾತಿ ಪಡೆಯುತ್ತಿರುವ ಅಲ್ಲಿನ ಸಂಸತ್ ಸದಸ್ಯ, ಕನ್ನಡಿಗ ಚಂದ್ರ ಆರ್ಯ ಅವರ ಕುರಿತು ಭಾರಿ ಮೆಚ್ಚುಗೆ ವ್ಯಕ್ತವಾಗಿರುವುದಷ್ಟೇ ಅಲ್ಲ, ಒಂದೇ ದಿನದಲ್ಲಿ ಅವರ ಹಿಂಬಾಲಕರ ಸಂಖ್ಯೆಯಲ್ಲೂ ಹೆಚ್ಚಳ ಕಂಡುಬಂದಿದೆ.

    ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು ಎಂಬಂತೆ ಚಂದ್ರ ಆರ್ಯ ಅವರು ಕೆನಡದಲ್ಲಿದ್ದರೂ ಕನ್ನಡಾಭಿಮಾನ ಉಳಿಸಿಕೊಂಡು ಸ್ಪಷ್ಟವಾಗಿ ಕನ್ನಡದಲ್ಲೇ ಮಾತನಾಡಿರುವುದು ಕನ್ನಡಿಗರೆಲ್ಲರ ಮನಗೆದ್ದಿದ್ದು, ಅವರ ಮಾತಿನ ತುಣುಕನ್ನು ಕನ್ನಡಾಭಿಮಾನಿಗಳು ಹಂಚಿಕೊಳ್ಳುತ್ತಿದ್ದು, ವಿಡಿಯೋ ವೈರಲ್ ಆಗಿದೆ.

    “ಮಾನ್ಯ ಸಭಾಪತಿ.. ಕೆನಡಾ ದೇಶದ ಸಂಸತ್ತಿನಲ್ಲಿ ನನ್ನ ಮಾತೃಭಾಷೆ ಕನ್ನಡದಲ್ಲಿ ಮಾತನಾಡಲು ಅವಕಾಶ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಭಾರತ ದೇಶದ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ವ್ಯಕ್ತಿಯೊಬ್ಬ ಕೆನಡಾದಲ್ಲಿ ಸಂಸತ್ ಸದಸ್ಯನಾಗಿ ಆಯ್ಕೆಯಾಗಿ ಮುದ್ದು ಕನ್ನಡದಲ್ಲಿ ಮಾತನಾಡುವುದು ಸುಮಾರು ಐದು ಕೋಟಿ ಕನ್ನಡಿಗರಿಗೆ ಹೆಮ್ಮೆಯ ಕ್ಷಣವಾಗಿದೆ. ಕೆನಡಾ ದೇಶದ ಕನ್ನಡಿಗರು 2018ನೇ ಇಸವಿಯಲ್ಲಿ ಕೆನಡಾದ ಈ ಸಂಸತ್ತಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು. ರಾಷ್ಟ್ರಕವಿ ಕುವೆಂಪು ಬರೆದಿರುವ ಮತ್ತು ನಟಸಾರ್ವಭೌಮ ರಾಜಕುಮಾರ್ ಹಾಡಿರುವ ಭಾವಗೀತೆಯ ಕೆಲವು ಪದಗಳೊಂದಿಗೆ ನನ್ನ ಹೇಳಿಕೆಯನ್ನು ಮುಗಿಸುತ್ತಿದ್ದೇನೆ. ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು, ಧನ್ಯವಾದಗಳು ಸಭಾಪತಿ..” ಎಂದು ಅವರು ಆಡಿರುವ ಮಾತುಗಳ ವಿಡಿಯೋ ವೈರಲ್​ ಆಗಿದೆ.

    ಅಷ್ಟೇ ಅಲ್ಲದೆ ಇದೇ ಕಾರಣಕ್ಕೆ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಫಾಲೋವರ್ ಸಂಖ್ಯೆ ಒಂದು ದಿನದಲ್ಲಿ ಅತ್ಯಧಿಕ ಹೆಚ್ಚಳ ಕಾಣುವಂತಾಗಿದೆ. ಫೇಸ್​ಬುಕ್​-ಟ್ವಿಟರ್ ಎರಡರಲ್ಲೂ ಅವರ ಹಿಂಬಾಲಕರ ಸಂಖ್ಯೆ ಹೆಚ್ಚಾಗಿದೆ. ಬೆಳಗ್ಗೆ ಫೇಸ್​ಬುಕ್​ನಲ್ಲಿ 9,500 ಹಾಗೂ ಟ್ವಿಟರ್​ನಲ್ಲಿ 10,500 ಇದ್ದ ಅವರ ಫಾಲೋವರ್ಸ್ ಸಂಖ್ಯೆ ಸಂಜೆಯ ಸುಮಾರಿಗೆ ಫೇಸ್​ಬುಕ್​ನಲ್ಲಿ 11,000 ಮತ್ತು ಟ್ವಿಟರ್​ನಲ್ಲಿ 13,300 ದಾಟಿದೆ.

    ಕೆನಡಾದಲ್ಲಿ ಕನ್ನಡ ಮಾತು: ಚಂದ್ರ ಆರ್ಯರಿಗೆ ಭಾರಿ ಬೆಂಬಲ; ಹಿಂಬಾಲಕರ ಸಂಖ್ಯೆಯಲ್ಲಿ ಹೆಚ್ಚಳ...
    ಚಂದ್ರ ಆರ್ಯ ಅವರ ಫೇಸ್​ಬುಕ್​-ಟ್ವಿಟರ್ ಪ್ರೊಫೈಲ್​ಗಳ ಸ್ಕ್ರೀನ್​ಶಾಟ್​.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts