ಕೋಟ ಬ್ಲಾಕ್ ಕಾಂಗ್ರೆಸ್‌ನಿಂದ ಸಾಮೂಹಿಕ ಗೋಪೂಜೆ

kota (8)
Published on

ಕೋಟ: ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೋಟ ಬ್ಲಾಕ್ ಕಾಂಗ್ರೆಸ್‌ನ ಹಿಂದುಳಿದ ಘಟಕದ ಪ್ರಧಾನ ಕಾರ್ಯದರ್ಶಿ ರಾಜು ಪೂಜಾರಿ ಗೋಳಿಬೆಟ್ಟು ಮಾತೃಕೃಪಾ ಮನೆಯಲ್ಲಿ ಕೃಷ್ಣ ಶರ್ಮ ಪೌರೋಹಿತ್ಯದಲ್ಲಿ ಸಾಮೂಹಿಕ ಗೋಪೂಜೆ ನೆರವೇರಿತು.

ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ ಎ.ಕುಂದರ್ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ರೇಖಾ ಪಿ.ಸುವರ್ಣ, ಸಾಲಿಗ್ರಾಮ ಪಪಂ ನಾಮನಿರ್ದೇಶಿತ ಸದಸ್ಯರಾದ ಬಸವ ಪೂಜಾರಿ ಗುಂಡ್ಮಿ, ಶೇಖರ್ ಪಿ.ಮರಕಾಲ, ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಬಾಲಕೃಷ್ಣ ಪೂಜಾರಿ ಸಾಸ್ತಾನ, ಸಾಲಿಗ್ರಾಮ ಪಪಂ ಸದಸ್ಯ ರವಿ ಕಾಮತ್ ಗುಂಡ್ಮಿ, ಬ್ಲಾಕ್ ಕಾಂಗ್ರೆಸ್ ಕೋಟ ಹಿಂದುಳಿದ ಘಟಕ ಅಧ್ಯಕ್ಷ ದಿನೇಶ್ ಬಂಗೇರ, ಪ್ರಮುಖರಾದ ಗೋಪಾಲ ಮಡಿವಾಳ, ವಿಜಯ ಪೂಜಾರಿ, ಕಮಲಾ ಗಣೇಶ್, ಸುಧಾಕರ್ ಪೂಜಾರಿ, ಮೋಸಸ್ ರೋಡ್ರಿಗಸ್, ಸುಭಾಶ್ ಶೆಟ್ಟಿ, ಅಚ್ಚುತ್ ಪೂಜಾರಿ, ಮೊಹಮ್ಮದ್ ಸುಹಾನ್, ರತ್ನಾಕರ್ ಪೂಜಾರಿ, ಶ್ರೀನಿವಾಸ್ ಶೆಟ್ಟಿಗಾರ್, ಕೃಷ್ಣ ಮೂರ್ತಿ ಪೂಜಾರಿ, ಸುಧಾಕರ್ ಪೂಜಾರಿ, ಮಂಜುನಾಥ್ ಪೂಜಾರಿ, ಗೌರಿ ಪೂಜಾರಿ, ರಾಜು ದೇವಾಡಿಗ, ವಿಜಯ ಪೂಜಾರಿ, ಮಿಥುನ್ ಶೆಟ್ಟಿಗಾರ್ ಉಪಸ್ಥಿತರಿದ್ದರು. ಕೋಟ ಅಮೃತೇಶ್ವರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಗಣೇಶ್ ಕೆ. ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net