

ಕಿನ್ನಿಗೋಳಿ: ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಭವಿಷ್ಯ ರೂಪಿಸುವ ಜವಾಬ್ದಾರಿ ಪಾಲಕರದ್ದು ಎಂದು ಶಿಕ್ಷಣ ತಜ್ಞ ಬಾಲಕೃಷ್ಣ ಪಿ. ಹೇಳಿದರು. ಮೇರಿವೇಲ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ-ರಕ್ಷಕ ಸಂಘದ ಮಹಾಸಭೆಯಲ್ಲಿ ಮಾತನಾಡಿದರು.
ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಡೋನ ಸಾಂಕ್ತಿಸ್, ಮೇರಿವೆಲ್ ಕಾನ್ವೆಂಟ್ನ ಮುಖ್ಯಸ್ಥೆ ಪ್ರೇಮಲತಾ ಬಿ.ಎಸ್, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರಾದ ಹೀರಾ ವಾಸ್, ಸತೀಶ್ ಸಾಲ್ಯಾನ್, ಉಪ ಮುಖ್ಯಶಿಕ್ಷಕಿ ಸೆಲಿನ್ ಪೇತ್ರಾ, ಮುಖ್ಯಶಿಕ್ಷಕಿ ಶಾಂತಿ ಫ್ಲಾವಿಯಾ ಬಿ.ಎಸ್. ಉಪಸ್ಥಿತರಿದ್ದರು.
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಶ್ವಿನಿ ವಂದಿಸಿದರು. ಸಹಶಿಕ್ಷಕಿ ವಿನೋದಾ ಕಾರ್ಯಕ್ರಮ ನಿರೂಪಿಸಿದರು.