ವಿವಾಹಿತೆ ಜತೆ ಯುವಕನ ಸಲ್ಲಾಪ, ತಡರಾತ್ರಿ ಸಿಕ್ಕಿಬಿದ್ದ ಜೋಡಿಯನ್ನ ಟ್ರ್ಯಾಕ್ಟರ್​ಗೆ ಕಟ್ಟಿಹಾಕಿದ ಗ್ರಾಮಸ್ಥರು!

crime
Published on

ಬೆಳಗಾವಿ: ಗಂಡನ ಕಣ್ತಪ್ಪಿಸಿ ತಡರಾತ್ರಿ ಮನೆಯಿಂದ ಹೊರಬಂದಾಕೆ ಎಲ್ಲಿ ಹೋದಳೆಂದು ಹಿಂಬಾಲಿಸಿದ ಕುಟುಂಬಸ್ಥರಿಗೆ ಕಾದಿತ್ತು ಶಾಕ್​! ಊರ ಹೊರವಲಯದ ಹೊಲದಲ್ಲಿ ಪ್ರಿಯಕರನೊಂದಿಗೆ ಸರಸ-ಸಲ್ಲಾಪದಲ್ಲಿ ತೊಡಗಿದ್ದ ಆಕೆ ಮತ್ತು ಆಕೆ ಪ್ರಿಯಕರನನ್ನು ರೆಡ್​ಹ್ಯಾಂಡ್​ ಆಗಿ ಹಿಡಿದು ಟ್ರ್ಯಾಕ್ಟರ್​ಗೆ ಕಟ್ಟಿಹಾಕಿ ಬುದ್ಧಿ ಕಲಿಸಿದ್ದಾರೆ.

ಈ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮುರಕಟನಾಳ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸಂವಿಸಿದೆ. ಚುಂಚನೂರ ಗ್ರಾಮದ ಭೀಮಸಿ ಜೆಟ್ಟೆನ್ನವರ್ ಮತ್ತು ಮುರಕಟನಾಳದ ಲಕ್ಷ್ಮೀ ಕೊಪ್ಪದ ಸಿಕ್ಕಿಬಿದ್ದ ಜೋಡಿಗಳು. ಲಕ್ಷ್ಮೀಗೆ ಬೇರೊಬ್ಬನ ಜತೆಗೆ ಮದುವೆ ಆಗಿದ್ದರೂ ಆಕೆಯೊಂದಿಗೆ ಭೀಮಸಿಗೆ ಅಕ್ರಮ ಸಂಬಂಧ ಇತ್ತು. ಇದನ್ನೂ ಓದಿರಿ 3 ಮಕ್ಕಳ ತಾಯಿ ಜತೆ ಯುವಕನ ಕಾಮಪುರಾಣ: ತ್ರೀಕೋನ ವಿವಾಹೇತರ ಸಂಬಂಧಕ್ಕೆ ಇಬ್ಬರು ಬಲಿ

ನಿನ್ನೆ ತಡರಾತ್ರಿ ಮನೆಯವರ ಕಣ್ತಪ್ಪಿಸಿ ಹೊರ ಹೊದಾಕೆ ಮುರಕಟನಾಳ ಗ್ರಾಮ ಹೊರವಲಯದ ಹೊಲದಲ್ಲಿ ಪ್ರಿಯಕರನನ್ನು ಭೇಟಿ ಮಾಡಿದ್ದಳು. ಅನುಮಾನಗೊಂಡು ಆಕೆಯ ಕುಟುಂಬಸ್ಥರು ಹಿಂಬಾಲಿಕೊಂಡು ಬಂದಿದ್ದರು. ಅನೈತಿಕ ಚಟುವಟಿಕೆ ನಡೆಸುತ್ತಿದ್ದಾಗಲೇ ಇಬ್ಬರನ್ನೂ ಹಿಡಿದು ಊರಿಗೆ ಕರೆತಂದರು. ಗ್ರಾಮಸ್ಥರು ಅವರಿಬ್ಬರನ್ನೂ ಸತತ ನಾಲ್ಕು ಗಂಟೆ ಕಾಲ ಟ್ರ್ಯಾಕ್ಟರ್​ಗೆ ಕಟ್ಟಿಹಾಕಿ ಬುದ್ಧಿ ಕಲಿಸಿದ್ದಾರೆ. ಟ್ರ್ಯಾಕ್ಟರ್​ಗೆ ಕಟ್ಟಿದ್ದ ದೃಶ್ಯ ವೈರಲ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net