

ಮೂಡುಬಿದಿರೆ: ಮಕ್ಕಳನ್ನು ಶಾಲೆಗೆ ಬಿಟ್ಟು ಬರಲು ತೆರಳಿದ ಕಡಂದಲೆ ಗ್ರಾಮದ ಪೂಪಾಡಿಕಲ್ಲಿನ ಪವಿತ್ರಾ(29) ಎಂಬುವರು ನಾಪತ್ತೆಯಾಗಿದ್ದಾರೆ. 9 ವರ್ಷದ ಹಿಂದೆ ಗಣೇಶ್ ಎಂಬುವರನ್ನು ಮದುವೆಯಾಗಿದ್ದು, ಒಬ್ಬ ಮಗನಿದ್ದಾನೆ. ಬುಧವಾರ ಬೆಳಗ್ಗೆ ಪುತ್ರ ಹಾಗೂ ತಂಗಿಯ ಮಗನನ್ನು ಕಡಂದಲೆ ವಿದ್ಯಾಗಿರಿ ಶಾಲೆಗೆ ಬಿಡಲು ಹೋಗಿದ್ದು, ಬಳಿಕ ಮನೆಗೆ ಹಿಂದಿರುಗಿಲ್ಲ. ಅಸುಪಾಸಿನಲ್ಲಿವರಲ್ಲಿ, ಸಂಬಂಧಿಕರಲ್ಲಿ ವಿಚಾರಿಸಿದರೂ ಯಾವುದೇ ಸುಳಿವು ಸಿಗಲಿಲ್ಲ. ಗುರುವಾರ ಬೆಳಗ್ಗೆ ಪವಿತ್ರಾ ಅವರ ತಂದೆ ಕೇಶವ ಶೆಟ್ಟಿಗಾರ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.