ಮಾಗಡಿ ಕನ್ನಡ ಪರ ಸಂಘಟನೆ ಧರ್ಮಸ್ಥಳ ಭೇಟಿ

New Project (24)
Published on

ಬೆಳ್ತಂಗಡಿ: ರಾಮನಗರ ಜಿಲ್ಲೆಯ ಮಾಗಡಿ ನಗರ ನಮ್ಮ ಕರ್ನಾಟಕ ನವನಿರ್ಮಾಣ ವೇದಿಕೆ ನೇತೃತ್ವದಲ್ಲಿ ನೂರು ವಾಹನಗಳಲ್ಲಿ 500 ಮಂದಿ ಗುರುವಾರ ಧರ್ಮಸ್ಥಳಕ್ಕೆ ಬಂದು ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಗೌರವಿಸಿದರು.

ಧರ್ಮಸ್ಥಳದ ಬಗ್ಗೆ ಆದ ಅಪಪ್ರಚಾರ ಮತ್ತು ವದಂತಿಯನ್ನು ಖಂಡಿಸಿ, ಕ್ಷೇತ್ರದ ಪಾವಿತ್ರ್ಯ ರಕ್ಷಣೆಗೆ ತಾವೆಲ್ಲರೂ ಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ಬಳಿಕ ದೇವರದರ್ಶನ ಮಾಡಿ, ಪ್ರಸಾದ ಸ್ವೀಕರಿಸಿ, ಊರಿಗೆ ಮರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net