

ವಿಜಯವಾಣಿ ಸುದ್ದಿಜಾಲ ಕೋಟ
ಕಾರಣಿಕ ಕ್ಷೇತ್ರಗಳಲ್ಲೊಂದಾದ ಕೋಟ ಮಣೂರಿನ ರಾಷ್ಟ್ರೀಯ ಹೆದ್ದಾರಿಯ ಸನಿಹದಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶ್ರೀ ಹೇರಂಬ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಕಾರ್ಯಕ್ರಮ ಏ.20ರಿಂದ 25ರ ತನಕ ನಡೆಯಲಿದೆ.
21ರಿಂದ ಮಣೂರು ಶ್ರೀ ಮಹಾಲಿಂಗೇಶ್ವರ ದೇವರ ಧಾರ್ಮಿಕ ಕಾರ್ಯಕ್ರಮ ತಂತ್ರಿಗಳಾದ ಪವಿತ್ರಪಾಣಿ ಗಣೇಶ ಐತಾಳ ಪಾರಂಪಳ್ಳಿ ನೇತೃತ್ವದಲ್ಲಿ ಹಾಗೂ ಶ್ರೀರಾಮ ಪ್ರಸಾದ ಆಡಿಗ ಗರಿಕೆಮಠ ಪೌರೋಹಿತ್ಯದಲ್ಲಿ ಸಕಲ ವಿಧಿ ವಿಧಾನಗಳೊಂದಿಗೆ ನಡೆಯಲಿದೆ.
21ರಂದು ಪ್ರಾರ್ಥನೆ, ನಾಂದಿ ಪುಣ್ಯಾಹ, ಮುಹೂರ್ತ ಬಲಿ, ಅಂಕುರ ಪುಣ್ಯಾಹ, ಧ್ವಜಾಧಿವಾಸ ಹೋಮ, ಧ್ವಜಾರೋಹಣ, ವೇದಾರಂಭ ಸಂಜೆ ಬಲಿ, ವಾಸ್ತು ರಕ್ಷೋಘ್ನ ಹೋಮ, ರಜ್ಜು ಬಂಧನ, ಉತ್ಸವ ಬಲಿ ನಡೆಯಲಿದೆ. 22ರಂದು ಪುಣ್ಯಾಹ ವಾಚನ, ಅಗ್ನಿ ಜನನ, ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ಸಂಜೆ ಬಲಿ, ಕಟ್ಟೆಪೂಜೆ, ಉತ್ಸವ ರಂಗಪೂಜೆ, ಉತ್ಸವ ಬಲಿ, ಕ್ಷೇತ್ರಪಾಲ ಪೂಜೆ, ಮಹಾಪೂಜೆ ಜರುಗಲಿದೆ.
23ರಂದು ಪುಣ್ಯಾಹ ವಾಚನ, ಪ್ರಧಾನ ಹೋಮ, ಕಲಶಾಭಿಷೇಕ, ರಥ ಶುದಿಟಛಿಹೋಮ, ರಥ ಪೂಜೆ, ರಥಾರೋಹಣ ಬಲಿ, ಪೂರ್ವಾಹ್ನ 11.55ಕ್ಕೆ ರಥಾರೋಹಣ, ಮಧ್ಯಾಹ್ನ 12.30ಕ್ಕೆ ಮಹಾ ಅನ್ನಸಂತರ್ಪಣೆ, ಸಂಜೆ ರಥಯಾತ್ರೆ, ರಥಾವರೋಹಣ, ಆಲಯ ಪ್ರವೇಶ, ಮಂಗಳಾರತಿ, ಪ್ರಸಾದ ವಿತರಣೆ, ಸಂಹಾರ ಬಲಿ, ದೇವರ ಶಯನೋತ್ಸವ, ವಿಶೇಷ ಆಕರ್ಷಣೆಯಾಗಿ ಕೊಂಬು ಕಹಳೆ, ಡೊಳ್ಳು ಕುಣಿತ, ಕೀಲು ಕುದುರೆ, ಚೆಂಡೆವಾದನ, ಬ್ಯಾಂಡ್ ಸೆಟ್, ಸಿಡಿಮದ್ದು ಪ್ರದರ್ಶನ ನಡೆಯಲಿದೆ.
24ರಂದು ಪ್ರಭೋದೋತ್ಸವ, ಅಷ್ಟಾವಧಾನ ಸೇವೆ ಹೋಮ, ಕಲಶಾಭಿಷೇಕ ಪೂಜೆ, ಸಂಜೆ ಸಂಹಾರ ಬಲಿ, ಚೂರ್ಣೋತ್ಸವ, ಅವಭೃತ ಪೂರ್ಣಾಹುತಿ, ಧ್ವಜಾವರೋಹಣ, ಮಹಾಮಂಗಳಾರತಿ, ಪ್ರಸಾದ ವಿತರಣೆ. 25ರಂದು ಸಂಪ್ರೋಕ್ಷಣೆ ನಡೆಯಲಿದೆ.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೇಗುಲ ಅಧ್ಯಕ್ಷ ಸತೀಶ್ ಎಚ್.ಕುಂದರ್ ನೇತೃತ್ವದಲ್ಲಿ ಆಯೋಜಿಸಲಾಗುತ್ತಿದೆ. ಏ.20ರಂದು ಸಂಜೆ 5.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ಶಾಸ್ತ್ರೀಯ ಸಂಗೀತ-ನೃತ್ಯ ವೈಭವ, ಛಾಯಾ ತರಂಗಿಣಿ ಸಂಗೀತ ಶಾಲೆ ಹರ್ತಟ್ಟು ಅವರಿಂದ ಸಂಜೆ 6ರಿಂದ ಸಾಂಸ್ಕೃತಿಕ ಸಿಂಚನ, ಸ್ನೇಹ ಕೂಟ ಮಣೂರು ಸದಸ್ಯರಿಂದ ಸಂಜೆ 7ಕ್ಕೆ ಯಕ್ಷಗುರು ಸೀತಾರಾಮ ಶೆಟ್ಟಿ ಕೂಯ್ಕೂರು ಅವರಿಗೆ ಸನ್ಯಾನ, ಮಣೂರು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿಯಿಂದ ‘ವೀರಮಣಿ-ಶಮಂತಕಮಣಿ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. 21ರಂದು ಸಂಜೆ 6.30ರಿಂದ ಮಣೂರು ಫ್ರೆಂಡ್ಸ್ ಮಣೂರು ಪ್ರಸ್ತುತಿಯಲ್ಲಿ ‘ಸ್ವರ-ನೃತ್ಯಾಂಜಲಿ’ ಸಿನಿಮಾ ನೃತ್ಯ ಮತ್ತು ರಸಮಂಜರಿ, ಸಂಜೆ 7.30ರಿಂದ ಸನ್ಮಾನ, ಪ್ರತಿಭಾ ಪುರಸ್ಕಾರ, ರಾತ್ರಿ 9.30ರಿಂದ ಕನ್ನುಕೆರೆ ಓಂಕಾರ್ ಕಲಾವಿದರಿಂದ ಹಾಸ್ಯಮಯ ನಾಟಕ ‘ವಾಚ್ಮ್ಯಾನ್’, 22ರಂದು ಸಂಜೆ 7ರಿಂದ 10ರವರೆಗೆ ಹನುಮಗಿರಿ ಮೇಳದವರಿಂದ ‘ಇಂದ್ರಪ್ರಸ್ಥ’ ಯಕ್ಷಗಾನ ಪ್ರದರ್ಶನ, 23ರಂದು ಬೆಳಗ್ಗೆ 10ರಿಂದ ರಾಜೇಶ್ ಭಟ್ ಮೂಡುಬಿದಿರೆ ಅವರಿಂದ ‘ಭಕ್ತಿಗಾನ ಲಹರಿ’, ಸಂಜೆ 4.30ರಿಂದ ಶ್ರೀ ರಾಮ ಮಹಿಳಾ ಭಜನಾ ಮಂಡಳಿ ಮಣೂರು ಅವರಿಂದ ಭಜನಾ ಸಂಕೀರ್ತನೆ ಜರುಗಲಿದೆ ಎಂದು ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಎಚ್.ಕುಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.