More

    ಪಲಿಮಾರು ಮಠ ಹನುಮಜಯಂತಿ

    ಪಡುಬಿದ್ರಿ: ಪಲಿಮಾರು ಮೂಲಮಠದಲ್ಲಿ ಏ.21ರಿಂದ 23ರ ವರೆಗೆ ಹನುಮಜಯಂತಿ ಮಹೋತ್ಸವ ನಡೆಯಲಿದ್ದು, 21ರಂದು ಬೆಳಗ್ಗೆ 7ಕ್ಕೆ ಸಂಸ್ಥಾನ ಪೂಜೆ ಮೂಲಕ ಕಾರ್ಯಕ್ರಮ ಆರಂಭವಾಗಲಿದೆ. 22ರಂದು ಬೆಳಗ್ಗೆ 5.30ರಿಂದ 108 ಪ್ರತ್ಯೇಕ ಕುಂಡಗಳಲ್ಲಿ 108 ಪವಮಾನ ಹೋಮ ಸಹಿತ ವಿಶೇಷ ಕಾರ್ಯಕ್ರಮ ನೆರವೇರಲಿದೆ.

    23ರಂದು ರಾಜರಾಜೇಶ್ವರ ಶ್ರೀಗಳ ಆರಾಧನಾ ಮಹೋತ್ಸವದ ಅಂಗವಾಗಿ ಬೆಳಗ್ಗೆ 7ಕ್ಕೆ ಸಂಸ್ಥಾನ ಪೂಜೆ, 8ಕ್ಕೆ ಫಲ ಪಂಚಾಮೃತ ಅಭಿಷೇಕ ನಡೆಯಲಿದೆ.

    ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪಲಿಮಾರು ಮಠಾಧೀಶ ವಿದ್ಯಾಧೀಶ ಶ್ರೀ, ಕಾಣಿಯೂರು ಮಠಾಧೀಶ ವಿದ್ಯಾವಲ್ಲಭ ಶ್ರೀ, ಸುಬ್ರಹ್ಮಣ್ಯ ಮಠಾಧೀಶ ವಿದ್ಯಾಪ್ರಸನ್ನ ಶ್ರೀ, ಭೀಮನಕಟ್ಟೆ ಮಠಾಧೀಶ ರಘುವರೇಂದ್ರ ಶ್ರೀ, ಸೋದೆ ಮಠಾಧೀಶ ವಿಶ್ವವಲ್ಲಭ ಶ್ರೀ, ಅದಮಾರು ಮಠಾಧೀಶ ಈಶಪ್ರಿಯ ಶ್ರೀ, ಪಲಿಮಾರು ಮಠದ ಕಿರಿಯ ಯತಿ ವಿದ್ಯಾರಾಜೇಶ್ವರ ಶ್ರೀ ಉಪಸ್ಥಿತರಿರುವರು.

    ಕಾರ್ಯಕ್ರಮದಲ್ಲಿ ಪೆರ್ಡೂರು ರಾಮದಾಸ ಉಪಾಧ್ಯಾಯರಿಗೆ ರಾಜರಾಜೇಶ್ವರ ಪ್ರಶಸ್ತಿ, ಕೊಂಡದಕುಳಿ ರಾಮಚಂದ್ರ ಹೆಗಡೆ ಅವರಿಗೆ ಯಕ್ಷವಿದ್ಯಾ ಮಾನ್ಯ ಹಾಗೂ ಪೊದುಮಲೆ ವೆಂಕಟ ಸುಭ್ರಾಯ ಭಟ್(ಕಂದಣ್ಣ) ಅವರಿಗೆ ಪಾಕವಿದ್ಯಾ ಮಾನ್ಯ ಪ್ರಶಸ್ತಿ ಪ್ರದಾನಿಸಲಾಗುತ್ತದೆ ಎಂದು ಪಲಿಮಾರು ಮಠ ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts