More

    ಮಕ್ಕಳಿಗೆ ಬಾಲ್ಯದಲ್ಲೇ ಧರ್ಮದ ಅರಿವು ಮೂಡಿಸಿ : ಡಾ.ಕಾರ್ತಿಕ್ ವಾಗ್ಲೆ ಸಲಹೆ

    ವಿಜಯವಾಣಿ ಸುದ್ದಿಜಾಲ ಶಿರ್ವ

    ಮಕ್ಕಳಿಗೆ ಬಾಲ್ಯದಲ್ಲೇ ಹಿಂದು ಧರ್ಮದ ಸಂಸ್ಕೃತಿಯನ್ನು ಪರಿಚಯಿಸಬೇಕಿದ್ದು, ಇದಕ್ಕೆ ಮನೆ, ಶಾಲೆ, ಮಠ ಮಂದಿರಗಳೇ ಆಧಾರ. ಇದರಿಂದ ಭಾರತದ ಸನಾತನ ಪರಂಪರೆ, ಜೀವನ ಮೌಲ್ಯಗಳ ಉಳಿವು ಸಾಧ್ಯ ಎಂದು ಹರಿಹರಪುರ ಪ್ರಬೋಧಿನಿ ಗುರುಕುಲದ ಪ್ರಾಚಾರ್ಯ ಡಾ.ಕಾರ್ತಿಕ್ ವಾಗ್ಲೆ ಹೇಳಿದರು.

    ಬಂಟಕಲ್ಲು ಶ್ರೀದುರ್ಗಾಪರಮೇಶ್ವರಿ ದೇವಳದಲ್ಲಿ ಅಕ್ಷಯಾಮೃತ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ, ರಾಜಾಪುರ ಸಾರಸ್ವತ ಸೇವಾ ವೃಂದ ಬಂಟಕಲ್ಲು ಆಶ್ರಯದಲ್ಲಿ ಶ್ರೀರಾಮ ನವಮಿ ಪೂರ್ವಭಾವಿಯಾಗಿ ಹಿರಿಯ ವಿದ್ವಾಂಸ ಡಾ.ಶಾಂತಾರಾಮ ಪ್ರಭುಗಳ ವಿಚಾರಧಾರೆ ಒಳಗೊಂಡ ಏಳು ದಿನಗಳ ಶ್ರೀರಾಮ ಕಥಾ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

    ಹಿರಿಯ ವಿದ್ವಾಂಸ ಡಾ.ಶಾಂತಾರಾಮ ಪ್ರಭು ಮಾತನಾಡಿ, 500 ವರ್ಷಗಳ ಹೋರಾಟದ ಬಳಿಕ ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆಯಾಗಿದ್ದು, ಈ ನಿಟ್ಟಿನಲ್ಲಿ ರಾಮಾಯಣದ ಅಧ್ಯಯನವನ್ನು ನಾವು ಕಡ್ಡಾಯ ಮಾಡಲೇಬೇಕು. ಇದು ಮನೆಮನೆಗಳಲ್ಲಿ ನಿರಂತರ ನಡೆಯಬೇಕು ಎಂದು ಹೇಳಿದರು.
    ಡಾ.ಶಾಂತಾರಾಮ ಪ್ರಭು ಅವರನ್ನು ಗೌರವಿಸಲಾಯಿತು. ರಾಜಾಪುರ ಸಾರಸ್ವತ ಸೇವಾ ವೃಂದದ ಅಧ್ಯಕ್ಷ ಕೆ.ಆರ್.ಪಾಟ್ಕರ್, ಕಾರ್ಯದರ್ಶಿ ವಿಶ್ವನಾಥ್ ಬಾಂದೇಲ್ಕರ್, ನಿವೃತ್ತ ಶಿಕ್ಷಕ ಬಿ.ಪುಂಡಲೀಕ ಮರಾಠೆ ಉಪಸ್ಥಿತರಿದ್ದರು.

    ದೇವಳದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ ಪ್ರಸ್ತಾವನೆಗೈದು ಸ್ವಾಗತಿಸಿದರು. ಶ್ರೀಕಾಂತ್ ಕಾಮತ್ ಹಿರೇಬೆಟ್ಟು ವಂದಿಸಿದರು. ನಿರ್ದೇಶಕ ಸುದರ್ಶನ ಪ್ರಭು, ನೂಜಿ ಜನಾರ್ದನ ನಾಯಕ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts