More

    ಶ್ರೀರಾಮನ ಆದರ್ಶ ಪಾಲನೆ : ಪೇಜಾವರ ಶ್ರೀ ಆಶೀರ್ವಚನ

    ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

    ಶ್ರೀ ರಾಮನನ್ನು ಸಮುದ್ರಕ್ಕೆ ಹೋಲಿಸುತ್ತಾರೆ. ಕರುಣಾ ಸಾಗರ ಎಂದು ಶ್ರೀರಾಮನನ್ನು ಕರೆಯುತ್ತಾರೆ. ರಾಮನ ಗಾಂಭೀರ್ಯ ಸಮುದ್ರದಂತೆ ಎಂದು ಬಣ್ಣಿಸುತ್ತಾರೆ. ಮೀನುಗಾರರು ಮತ್ತು ಶ್ರೀರಾಮನಿಗೆ ಅವಿನಾಭಾವ ಸಂಬಂಧವಿದೆ. ಶ್ರೀ ರಾಮನ ಆದರ್ಶಗಳನ್ನು ಮೀನುಗಾರರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಿರಂತರವಾಗಿ ಸತ್ಕರ್ಮಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

    ಹೊಸಾಡು ಗ್ರಾಮದ ಕಂಚುಗೋಡು ಶ್ರೀ ರಾಮ ದೇವಸ್ಥಾನದ ಸುವರ್ಣ ಮಹೋತ್ಸವ ಪ್ರಯುಕ್ತ ‘ಸುವರ್ಣ ಸಂಭ್ರಮ-ಸಂತಸ ಸಂಗಮ’ ಕಾರ್ಯಕ್ರಮ ಅಂಗವಾಗಿ ಗುರುವಾರ ರಾತ್ರಿ ನಡೆದ ‘ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವ’ದಲ್ಲಿ ಆಶೀರ್ವಚನ ನೀಡಿದರು.

    ಶ್ರೀರಾಮನನ್ನು ಶ್ರದ್ಧಾಭಕ್ತಿಯಿಂದ ಪೂಜಿಸಿ ಆರಾಧಿಸಬೇಕು. ಶ್ರೀ ರಾಮಚಂದ್ರನ ಅನುಗ್ರಹ ಸದಾ ಮೀನುಗಾರರ ಮೇಲೆ ಇರುತ್ತದೆ. ಯಾವುದೇ ಕಷ್ಟ, ಸಂಕಷ್ಟ ಎದುರಾದಾಗ ಪ್ರಭು ಶ್ರೀ ರಾಮಚಂದ್ರನ ಸ್ಮರಣೆ ಮಾಡಿದರೆ ದೈವಾನುಗ್ರಹ ಪ್ರಾಪ್ತಿಯಾಗಿ ಜೀವನ ಸುಖಮಯವಾಗುತ್ತದೆ ಎಂದು ಆಶೀರ್ವದಿಸಿದರು.

    ಪುರೋಹಿತ ಡಾ.ಎ.ಚನ್ನಕೇಶವ ಗಾಯತ್ರಿ ಭಟ್ ಆನಗಳ್ಳಿ, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾಗೇಶ ಖಾರ್ವಿ ಹಾಗೂ ಪದಾಧಿಕಾರಿಗಳು, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಚೌಕಿ ಸಂತೋಷ ಖಾರ್ವಿ ಹಾಗೂ ಪದಾಧಿಕಾರಿಗಳು, ಮಹಿಳಾ ಸೇವಾ ಸಮಿತಿ ಪದಾಧಿಕಾರಿಗಳು, ಶ್ರೀ ರಾಮ ಭಜನಾ ಮಂಡಳಿ ಪದಾಧಿಕಾರಿಗಳು, ಗ್ರಾಮಸ್ಥರು, ಭಕ್ತರು ಉಪಸ್ಥಿತರಿದ್ದರು. ರಾಘವೇಂದ್ರ ವಿ.ಕೆ. ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts