

ಬೆಳ್ತಂಗಡಿ: ಶ್ರೀ ಮಾಯ ಮಹೇಶ್ವರ ಭಜನಾ ಮಂಡಳಿ ಮಾಯ ಬೆಳಾಲು ಆಶ್ರಯದಲ್ಲಿ 42ನೇ ವರ್ಷದ ಕಾರ್ಯಕ್ರಮದ ಅಂಗವಾಗಿ ಶ್ರೀ ಮಾಯ ಮಹದೇವ ದೇವಸ್ಥಾನದ ವಠಾರದಲ್ಲಿ ಭಜನಾ ಕಮ್ಮಟೋತ್ಸವ ನಡೆಯಿತು.
ಆರಿಕೋಡಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಉದ್ಘಾಟಿಸಿದರು. ಭಜನಾ ಮಂಡಳಿಯ ಅಧ್ಯಕ್ಷ ಹರೀಶ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಎಚ್.ಪದ್ಮ ಗೌಡ, ಬೆಳ್ತಂಗಡಿ ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿ ಚಂದ್ರ ಶೇಖರ ಸಾಲಿಯಾನ್, ಡಾ.ಸೌಮ್ಯಾ, ಕೆ.ರಮೇಶ್ ಕುಮಾರ್, ಕೊಲ್ಪಾಡಿ ಭಜನಾ ಮಂಡಳಿ ಅಧ್ಯಕ್ಷ ಸದಾಶಿವ ಗೌಡ, ಅನಂತೋಡಿ ಭಜನಾ ಮಂಡಳಿ ಅಧ್ಯಕ್ಷ ನವೀನ್ ಗೌಡ, ಸೌತಡ್ಕ ದೇವಸ್ಥಾನದ ಅರ್ಚಕ ಸತ್ಯಪ್ರಿಯ ಕಲ್ಲೂರಾಯ, ಹಿರಿಯ ಭಜಕರಾದ ಸುಬ್ರಾಯ ಹೊಳ್ಳ, ಕುಂಭ ಗೌಡ, ಕೃಷ್ಣಪ್ಪ ಅರಸಿನಮಕ್ಕಿ, ಮಂಜುನಾಥ ಆಚಾರ್ಯ, ಪುರುಷೋತ್ತಮ ಕೊಕ್ಕಡ, ಕೃಷ್ಣಪ್ಪ ಗೌಡ, ಗಂಗಾಧರ ಸಾಲಿಯಾನ್, ಬಾಲಚಂದ್ರ ಆಚಾರ್ಯ, ನಾರಾಯಣ ಮಡಿವಾಳ ಇದ್ದರು.
ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಮ್ಮಟ ನಡೆಯಿತು. ಗೌರವ ಸಲಹೆಗಾರ ಪತ್ರಕರ್ತ ಜಾರಪ್ಪ ಪೂಜಾರಿ ಸ್ವಾಗತಿಸಿದರು. ಶಿಕ್ಷಕ ಮಹೇಶ್ ನಿರೂಪಿಸಿದರು.
ವಿಟ್ಲ ಮಂಜಲಾಡಿ ಕ್ಷೇತ್ರದ ಧರ್ಮದರ್ಶಿ ಪ್ರಸಾದ್ ಎಂ, ಓಡಿಲ್ನಾಳ ಧರ್ಮೋತ್ಥಾನ ಟ್ರಸ್ಟ್ ಅಧ್ಯಕ್ಷ ವೃಷಭ ಆರಿಗ, ಮಾಯ ದೇವಸ್ಥಾನ ವ್ಯವಸ್ಥಾಪಕ ಶೇಖರ ಗೌಡ, ಮಾಯ ಫ್ರೆಂಡ್ಸ್ ಅಧ್ಯಕ್ಷ ರಾಧಾಕೃಷ್ಣ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇವಾ ಪ್ರತಿನಿಧಿ ಪ್ರಭಾ ದಿನೇಶ್, ವರ ಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆ ಲಲಿತಾ, ರಘು ಎಂ, ಬೆಳಾಲು ಶ್ರೀ ರಾಮ ಶಾಖೆಯ ಅಧ್ಯಕ್ಷ ರಮಿತ್ ಗೌಡ, ಉದ್ಯಮಿ ಜಯಣ್ಣ, ಯಶೋಧರ ಆಚಾರ್ಯ, ಉದ್ಯಮಿ ಸುಭಾಸ್ ಉಪಸ್ಥಿತರಿದ್ದರು.
ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮ ಗೌಡ, ಬೆಳಾಲು ಪ್ರೌಢಶಾಲಾ ಮುಖ್ಯಶಿಕ್ಷಕ ರಾಮಕೃಷ್ಣ ಭಟ್, ಭಜನಾ ತರಬೇತುದಾರರಾದ ಹರೀಶ್ ವಿ.ನೆರಿಯ, ಸಂದೇಶ್ ಮದ್ದಡ್ಕ, ಸಾಹಿತಿ ವಿಮಲ ದುಗ್ಗಣ್ಣ, ದೈವ ನರ್ತಕ ಲಿಂಗಪ್ಪ ಪರವ ಅವರನ್ನು ಗೌರವಿಸಲಾಯಿತು.