ಮೇ 7ರವರೆಗೆ ಹೀಟ್ ವೇವ್, ಬಿಸಿಗಾಳಿಯಿಂದ ರಕ್ಷಣೆ ಅವಶ್ಯಕ

Heat wave
Published on

ಉಡುಪಿ: ಹವಾವಾನ ಇಲಾಖೆಯ ಮುನ್ಸೂಚನೆಯಂತೆ ಮೇ 7ರವರೆಗೆ ಹೀಟ್ ವೇವ್(ಬಿಸಿಗಾಳಿ) ಮುಂದುವರೆಯಲಿದ್ದು, ಸೂರ್ಯನ ಶಾಖ ದಿನದಿಂದ ದಿನಕ್ಕೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಶಾಖದ ಹೊಡೆತ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಗರಿಷ್ಠ ತಾಪವಾನದ ಅವಧಿಯಲ್ಲಿ ಮಧ್ಯಾಹ್ನ 12ರಿಂದ 3ರವರೆಗೆ ಬಿಸಿಲಿಗೆ ಹೋಗುವುದನ್ನು ಕಡಿಮೆ ವಾಡಬೇಕು ಎಂದು ಜಿಲ್ಲಾಡಳಿತ ಸಲಹೆ ನೀಡಿದೆ.

ಪ್ರಯಾಣ ಸಂದರ್ಭ ನೀರನ್ನು ಜತೆಗೆ ಕೊಂಡೊಯ್ಯಬೇಕು. ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಚಹಾ, ಕಾಫಿ ಮತ್ತು ಕಾರ್ಬೋನೇಟೆಡ್‌ನಂತಹ ತಂಪು ಪಾನೀಯಗಳನ್ನು ಸೇವಿಸಬಾರದು. ಸಾಧ್ಯವಾದಷ್ಟು ಬಿಸಿ ಆಹಾರ ಸೇವಿಸಬೇಕು. ಹಿರಿಯ ನಾಗರಿಕರು ಹಾಗೂ ಮಕ್ಕಳು ಹೆಚ್ಚು ನೀರು ಸೇವಿಸಬೇಕು. ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಹಾಗೂ ಸಾಕುಪ್ರಾಣಿಗಳನ್ನು ಬಿಡಬಾರದು.

ಮೂರ್ಛೆ ಅಥವಾ ಅನಾರೋಗ್ಯ ಅನ್ನಿಸಿದ್ದಲ್ಲಿ ತಕ್ಷಣ ವೈದ್ಯರನ್ನು ಭೇಟಿ ವಾಡಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ನಿಂಬೆ ನೀರು, ಮಜ್ಜಿಗೆ ಮೊದಲಾದ ಮನೆಯಲ್ಲಿಯೇ ತಯಾರಿಸಿದ ಪಾನೀಯ ಹಾಗೂ ಒಆರ್‌ಎಸ್ ಬಳಸಬೇಕು. ಮನೆಯನ್ನು ತಂಪಾಗಿರಿಸಲು ಪರದೆ, ಶಟರ್‌ಗಳು ಅಥವಾ ಸನ್‌ಶೇಡ್‌ಗಳನ್ನು ಬಳಸಬೇಕು. ಆಗಿಂದಾಗ್ಗೆ ತಣ್ಣೀರು ಸ್ನಾನ ವಾಡಬೇಕು.

ಆರೋಗ್ಯ ಸಮಸ್ಯೆ

ಅತಿ ಹೆಚ್ಚು ತಾಪವಾನದಿಂದ ಸಾವಾನ್ಯವಾಗಿ ನಿರ್ಜಲೀಕರಣ, ಎಡೆರ್ನಾ(ಊತ) ಮತ್ತು ಮೂರ್ಛೆ ಹೋಗುವುದು, ಆಯಾಸ, ದೌರ್ಬಲ್ಯ, ತಲೆತಿರುಗುವಿಕೆ, ತಲೆ ನೋವು, ವಾಕರಿಕೆ, ವಾಂತಿ, ಸ್ನಾಯು ಸೆಳೆತ, ಬೆವರುವುದು, ದೇಹದ ಉಷ್ಣತೆ ಹೆಚ್ಚಾಗುವುದು, ಉಸಿರಾಟದಲ್ಲಿ ವ್ಯತ್ಯಯ ಹಾಗೂ ಪ್ರಜ್ಞೆ ತಪ್ಪುವುದು ಸಂಭವಿಸಬಹುದು. ಈ ಸಂದರ್ಭ ಅತಿ ಹೆಚ್ಚು ತಾಪವಾನಕ್ಕೆ ತುತ್ತಾದವರನ್ನು ನೆರಳಿನಡಿ ತಂಪಾದ ಸ್ಥಳಕ್ಕೆ ಸ್ಥಳಾಂತರಿಸಬೇಕು.

ಒದ್ದೆ ಬಟ್ಟೆಯಿಂದ ಮೈ ಒರೆಸಬೇಕು. ತಂಪಾದ ಒದ್ದೆಬಟ್ಟೆಯನ್ನು ವ್ಯಕ್ತಿಯ ಮೇಲೆ ಹಾಕಬೇಕು. ದೇಹದ ಉಷ್ಣತೆ ತಗ್ಗಿಸಲು ತಲೆ ಮೇಲೆ ನೀರು ಹಾಕಬೇಕು. ಬಟ್ಟೆಯನ್ನು ಸಡಿಲಗೊಳಿಸಿ, ತಂಪಾದ ಗಾಳಿ ವ್ಯವಸ್ಥೆ ವಾಡಬೇಕು. ವ್ಯಕ್ತಿಯು ಪ್ರಜ್ಞೆ ಹೊಂದಿದ್ದರೆ ನೀರು ಅಥವಾ ಪುನರ್ಜಲೀಕರಣ ಪಾನೀಯಗಳಾದ ಒಆರ್‌ಎಸ್, ನಿಂಬೆ ಪಾನಕ ನೀಡಬೇಕು. ಹೀಟ್ ವೇವ್ ಸ್ಟೋಕ್‌ಗೆ ಒಳಗಾದ ವ್ಯಕ್ತಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧ್ಯಕ್ಷೆ, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುವಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net