

ಗಂಗೊಳ್ಳಿ: ಕಂಚುಗೋಡು ಶ್ರೀ ರಾಮ ದೇವಸ್ಥಾನದಲ್ಲಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ಶ್ರೀಪಾದಂಗಳವರ ಉಪಸ್ಥಿತಿಯಲ್ಲಿ ಲೋಕಕಲ್ಯಾಣಾರ್ಥ ವಾಗಿ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವ ಗುರುವಾರ ಸಂಜೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ವಿಜೃಂಭಣೆಯಿಂದ ನಡೆಯಿತು.
ವಿವಿಧ ವಾದ್ಯಘೋಷಗಳೊಂದಿಗೆ ದಿಬ್ಬಣ ಎದುರುಗೊಳ್ಳುವಿಕೆ, ವಧು ನಿರೀಕ್ಷಣೆ, ಅರಶಿಣ ಕುಂಕುಮ ಸಮರ್ಪಣೆ, ತಾಳಿ ಕಟ್ಟುವುದು, ಧಾರೆ ಎರೆಯುವುದು, ಚಿನ್ನಾಭರಣ ಮತ್ತು ಕಪ್ಪ ಕಾಣಿಕೆ ಸಮರ್ಪಣೆ, ಅಷ್ಟಾವಧಾನ ಸೇವೆ, ಪ್ರಸನ್ನ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮ ಡಾ.ಎ.ಚನ್ನಕೇಶವ ಗಾಯತ್ರಿ ಭಟ್ ಆನಗಳ್ಳಿ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಜರುಗಿತು. ರಾತ್ರಿ ಮಹಾಅನ್ನ ಸಂತರ್ಪಣೆ ನಡೆಯಿತು.
15 ಸಾವಿರಕ್ಕೂ ಅಧಿಕ ಮಂದಿ ಸಾಕ್ಷಿಯಾದರು. ಭಜನೆ, ಗಾಯನ, ಕುಣಿತ ಭಜನೆ, ಭರತನಾಟ್ಯ ಕಲ್ಯಾಣೋತ್ಸವದ ಸೊಬಗು ಹೆಚ್ಚಿಸಿತು.