ಕತ್ತು ಕೊಯ್ದುಕೊಂಡು ಆತ್ಮಹತ್ಯೆ; ಸ್ಥಳದಲ್ಲಿ ಡೆತ್​ನೋಟ್ ಸಿಕ್ಕಿದ್ದರೂ ಅನುಮಾನ!

Mohan
Published on

ಬೆಂಗಳೂರು: ಯುವಕನೊಬ್ಬ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳದಲ್ಲಿ ಡೆತ್​ನೋಟ್ ಕೂಡ ಸಿಕ್ಕಿದೆ. ಈ ಮಧ್ಯೆ ಇದು ಕೊಲೆಯೋ ಆತ್ಮಹತ್ಯೆಯೋ ಎಂಬ ಅನುಮಾನ ಕೂಡ ಮೂಡಿದೆ. ಬೆಂಗಳೂರು ಉತ್ತರ ತಾಲೂಕಿನ ದೊಡ್ಡಬಿದರಕಲ್ಲಿನ ಸಿದ್ಧಾರ್ಥನಗರ ಬಳಿ ಈ ಪ್ರಕರಣ ನಡೆದಿದೆ.

ಬೆಂಗಳೂರು ನಿವಾಸಿ, ತುಮಕೂರು ಮೂಲದ ಮೋಹನ್ (29) ಸಾವಿಗೀಡಾಗಿರುವ ಯುವಕ. ಈತ ಕಳೆದ 3-4 ವರ್ಷಗಳಿಂದ ಸಿದ್ದಾರ್ಥ ನಗರದಲ್ಲಿ ವಾಸವಿದ್ದ. ಜಾಲಹಳ್ಳಿ ಕ್ರಾಸ್ ಬಳಿಯ ಗಾರ್ಮೆಂಟ್ಸ್ ಔಟ್​​ಲೆಟ್​ ಶೋ ರೂಮ್​ನಲ್ಲಿ ಕೆಲಸ ಮಾಡುತ್ತಿದ್ದ.

ಇಂದು ಈತನ ಶವ ಸಿದ್ಧಾರ್ಥನಗರಕ್ಕೆ ಸಮೀಪದ ನಿರ್ಜನ ಪ್ರದೇಶದಲ್ಲಿ ಕಂಡುಬಂದಿದೆ. ಕತ್ತುಕೊಯ್ದ ಸ್ಥಿತಿಯಲ್ಲಿ ಮೃತದೇಹ ಸಿಕ್ಕಿದ್ದು, ಸ್ಥಳದಲ್ಲಿ ತರಕಾರಿ ಕಟ್ ಮಾಡು ಚಾಕು ಹಾಗೂ ಡೆತ್​ನೋಟ್ ಕೂಡ ಸಿಕ್ಕಿದೆ. ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್​ನೋಟ್​ನಲ್ಲಿ ಬರೆಯಲಾಗಿದೆ. ಅದಾಗ್ಯೂ ಒಂದಷ್ಟು ಅನುಮಾನಗಳು ಇರುವುದರಿಂದ ಕೊಲೆ ನಡೆದಿರಬಹುದಾ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net