ಕ್ರೂರ ಅಭಿಮಾನ: ಟಗರು ತಲೆ ಕಟ್ ಮಾಡಿ ಕಟೌಟ್​ಗೆ ನೇತು ಹಾಕಿದ್ರು ಅಲ್ಲು ಅರ್ಜುನ್ ಫ್ಯಾನ್ಸ್!

Allu Arjun 2
Published on

ರಾಯಚೂರು: ಅಲ್ಲು ಅರ್ಜುನ್ ಹೊಸ ಸಿನಿಮಾ ನೋಡಲು ಹೋದವರಿಗೆ 'ಪುಷ್ಪ ಎಂದರೆ ಫ್ಲವರ್ ಅಲ್ಲ ಫೈರ್​' ಎಂಬ ಡೈಲಾಗ್​ ಇರುವ ದೃಶ್ಯದ ದರ್ಶನವಾಗುತ್ತದೆ. ಆದರೆ ಇಲ್ಲೊಂದು ಚಿತ್ರಮಂದಿರದಲ್ಲಿ ಕಡೆ 'ಪುಷ್ಪ ಎಂದರೆ ಫ್ಲವರ್ ಅಲ್ಲ ಕ್ರೂಯೆಲ್​' ಎಂದೆನಿಸುವಂಥ ದೃಶ್ಯ ಕಾಣಿಸಿದೆ.

ಅಂದರೆ ಅಲ್ಲು ಅರ್ಜುನ್ ಅಭಿಮಾನಿಗಳೆನ್ನಲಾದ ಒಂದಷ್ಟು ಮಂದಿ ಅಭಿಮಾನದ ಹೆಸರಲ್ಲಿ ಕ್ರೂರವಾಗಿ ನಡೆದುಕೊಂಡಿದ್ದಾರೆ. ಇಂಥದ್ದೊಂದು ಕ್ರೌರ್ಯದ ಸನ್ನಿವೇಶ ರಾಯಚೂರಿನ ಪೂರ್ಣಿಮಾ ಚಿತ್ರಮಂದಿರದಲ್ಲಿ ಇಂದು ಕಂಡುಬಂದಿದೆ.

ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ' ಚಿತ್ರದ ಬಿಡುಗಡೆ ಹಿನ್ನೆಲೆಯಲ್ಲಿ ಟಾಕೀಸಿಗೆ ಬಂದ ಅಭಿಮಾನಿಗಳು ಟಗರೊಂದರ ತಲೆ ಕಡೆದಿದ್ದಾರೆ. ಬಳಿಕ ಅದರ ರುಂಡವನ್ನು ಲಿಂಬೆಯ ಹಾರಕ್ಕೆ ಹಾಕಿ ಅಲ್ಲು ಅರ್ಜುನ್​ ಕಟೌಟ್​ಗೆ ನೇತು ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net