More

    ಮತ್ತದೇ ಹಳಿಗೆ ಬಂತು ನಮ್ಮ ಮೆಟ್ರೊ ಸಂಚಾರ; ಕ್ರಿಸ್​ಮಸ್​-ಹೊಸ ವರ್ಷಾಚರಣೆ ಸಂದರ್ಭದಲ್ಲೇ ಅವಧಿ ವಿಸ್ತಾರ..

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಂಚರಿಸುವ ತಮ್ಮ ಪ್ರಯಾಣಿಕರಿಗೆ ನಮ್ಮ ಮೆಟ್ರೊ ಮತ್ತಷ್ಟು ಅನುಕೂಲ ಮಾಡಿಕೊಡಲು ಮುಂದಾಗಿದೆ. ಕ್ರಿಸ್​​ಮಸ್​ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮೆಟ್ರೊ ಈ ವ್ಯವಸ್ಥೆ ಮಾಡಿದೆ. ಈ ಮೂಲಕ ನಮ್ಮ ಮೆಟ್ರೊ ಸಂಚಾರ ಮತ್ತದೇ ‘ಹಳಿಗೆ’ ಮರಳಲಿದ್ದು, ಅವಧಿ ವಿಸ್ತಾರವಾಗಲಿದೆ.

    ಕ್ರಿಸ್​ಮಸ್​ ಹಾಗೂ ಹೊಸ ವರ್ಷಾಚರಣೆ ಸಲುವಾಗಿ ಜನರ ಓಡಾಟ ಹೆಚ್ಚಿರುವ ಕಾರಣ ನಮ್ಮ ಮೆಟ್ರೊ ರೈಲು ಸಂಚಾರ ಅವಧಿಯನ್ನು ವಿಸ್ತರಿಸಲು ನಿರ್ಧರಿಸಿದೆ. ಅಂದರೆ ಡಿ.20ರಿಂದ ಬೆಳಗ್ಗೆ 5 ಗಂಟೆಯಿಂದಲೇ ಮೆಟ್ರೋ ರೈಲು ಸಂಚಾರ ಆರಂಭವಾಗಲಿದ್ದು, ಕೊನೆಯ ರೈಲು ರಾತ್ರಿ 11ಕ್ಕೆ ಹೊರಡಲಿದೆ.

    ಇದನ್ನೂ ಓದಿ: ಎರಡೇ ದಿನಗಳಲ್ಲಿ ಇನ್ನೊಂದು ಭೀಕರ ಅಪಘಾತ, ಮತ್ತೊಬ್ಬರು ಸ್ಥಳದಲ್ಲೇ ಸಾವು!

    ರಾಜಧಾನಿಯ ಎಲ್ಲ ರೈಲು ಟರ್ಮಿನಲ್​ಗಳಿಂದ ಬೆಳಗ್ಗೆ 5 ಗಂಟೆಗೆ ರೈಲು ಸಂಚಾರ ಆರಂಭಿಸಲಾಗುತ್ತಿದ್ದು, ರಾತ್ರಿ 11 ಗಂಟೆವರೆಗೆ ರೈಲು ಸಂಚಾರ ಮಾಡಲಿವೆ.ಆದರೆ, ಭಾನುವಾರ ಬೆಳಗ್ಗೆ 7 ಗಂಟೆಗೆ ರೈಲು ಸಂಚಾರ ಶುರುವಾಗುತ್ತದೆ. ಕೋವಿಡ್ ಸಂಕಷ್ಟಕ್ಕೂ ಮೊದಲು ಇದೇ ವೇಳಾಪಟ್ಟಿ ಇದ್ದರೂ, ನಂತರ ಕರೊನಾ ಹಿನ್ನೆಲೆಯಲ್ಲಿ ರೈಲು ಸಂಚಾರ ಅವಧಿಯನ್ನು ಕಡಿತಗೊಳಿಸಲಾಗಿತ್ತು.

    ಮತ್ತದೇ ಹಳಿಗೆ ಬಂತು ನಮ್ಮ ಮೆಟ್ರೊ ಸಂಚಾರ; ಕ್ರಿಸ್​ಮಸ್​-ಹೊಸ ವರ್ಷಾಚರಣೆ ಸಂದರ್ಭದಲ್ಲೇ ಅವಧಿ ವಿಸ್ತಾರ..

    ಅಜ್ಜಿಯೊಂದಿಗೆ ಫ್ಲ್ಯಾಟ್​ ನೋಡಲು ಹೋಗಿದ್ದ 2 ವರ್ಷದ ಬಾಲಕ ಐದನೇ ಮಹಡಿಯಿಂದ ಬಿದ್ದು ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts