ಅಜ್ಜಿಯೊಂದಿಗೆ ಫ್ಲ್ಯಾಟ್​ ನೋಡಲು ಹೋಗಿದ್ದ 2 ವರ್ಷದ ಬಾಲಕ ಐದನೇ ಮಹಡಿಯಿಂದ ಬಿದ್ದು ಸಾವು!

ಬೆಂಗಳೂರು: ಅಜ್ಜಿಯೊಂದಿಗೆ ಫ್ಲ್ಯಾಟ್ ನೋಡಲು ಹೋಗಿದ್ದ ಎರಡು ವರ್ಷದ ಬಾಲಕ ಐದನೇ ಮಹಡಿಯಿಂದ ಬಿದ್ದು ಸಾವಿಗೀಡಾದ ದುರಂತವೊಂದು ನಗರದಲ್ಲಿ ಸಂಭವಿಸಿದೆ. ದಿವ್ಯಾಂಶ್​ ರೆಡ್ಡಿ (2) ಸಾವಿಗೀಡಾದ ಬಾಲಕ. ಎಲೆಕ್ಟ್ರಾನಿಕ್​ ಸಿಟಿಯ ಇನ್​ವೆಸ್​ಮೆಂಟ್​ ಲೇಔಟ್​ನಲ್ಲಿ ಈ ಅವಘಡ ಸಂಭವಿಸಿದೆ. ದಿವ್ಯಾಂಶ್​ನ ಅಜ್ಜಿ ಕೆಲವು ದಿನಗಳಿಂದ ಬಾಡಿಗೆ ಮನೆಗಾಗಿ ಹುಡುಕಾಟ ನಡೆಸುತ್ತಿದ್ದರು. ಇಂದು ಸಂಜೆ ಇನ್​ವೆಸ್​ಮೆಂಟ್​ ಲೇಔಟ್​ನ ಅಪಾರ್ಟ್​ಮೆಂಟ್​ವೊಂದರಲ್ಲಿನ ಫ್ಲ್ಯಾಟ್​ ನೋಡಲು ಹೋಗುವಾಗ ಅಜ್ಜಿ ದಿವ್ಯಾಂಶ್​ನನ್ನು ಕರೆದುಕೊಂಡು ಹೋಗಿದ್ದರು. ಅಜ್ಜಿ ಫ್ಲ್ಯಾಟ್​ ನೋಡುತ್ತಿದ್ದಾಗ ಬಾಲಕ ಆಯತಪ್ಪಿ ಐದನೇ ಮಹಡಿಯಿಂದ ಕೆಳಕ್ಕೆ … Continue reading ಅಜ್ಜಿಯೊಂದಿಗೆ ಫ್ಲ್ಯಾಟ್​ ನೋಡಲು ಹೋಗಿದ್ದ 2 ವರ್ಷದ ಬಾಲಕ ಐದನೇ ಮಹಡಿಯಿಂದ ಬಿದ್ದು ಸಾವು!