ನಾನು-ಪತಿ ಡಬಲ್ ಇಂಜಿನ್​ನಂತೆ ಸೇವೆ ಸಲ್ಲಿಸುತ್ತೇವೆ: ಮಂಜುಳಾ ಅರವಿಂದ ಲಿಂಬಾವಳಿ ಭರ್ಜರಿ ಪ್ರಚಾರ

Manjula Limbavali
Published on

ಮಹದೇವಪುರ: ಬೆಂಗಳೂರು ಪೂರ್ವ ತಾಲೂಕಿನ ಮಹದೇವಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಂಜುಳಾ ಅರವಿಂದ ಲಿಂಬಾವಳಿ ಶುಕ್ರವಾರ ಸಾವಿರಾರು ಕಾರ್ಯಕರ್ತ ರೊಂದಿಗೆ ಬೃಹತ್ ರೋಡ್ ಶೋ ನಡೆಸುವ ಮೂಲಕ ಅಬ್ಬರದ ಪ್ರಚಾರ ನಡೆಸಿದರು.

ಪತಿ ಅರವಿಂದ ಲಿಂಬಾವಳಿ ಅವರ ಪಕ್ಷ ಸಂಘಟನೆ, ಅಭಿವೃದ್ಧಿ ಕಾರ್ಯ ಮೆಚ್ಚಿ ಕಾಂಗ್ರೆಸ್​ನ ಹಿರಿಯ ಮುಖಂಡರಾದ ಜಿ.ಎಂ. ನಾರಾಯಣ್, ಎಚ್.ಕೆ. ನಾರಾಯಣಸ್ವಾಮಿ, ರಘು ಸೇರಿ ನೂರಾರು ಕಾಂಗ್ರೆಸ್ ಮುಖಂಡರಿಗೆ ಪಕ್ಷದ ಶಾಲು ಹಾಕುವ ಮೂಲಕ ಬಿಜೆಪಿಗೆ ಬರಮಾಡಿಕೊಂಡರು.

ಕ್ಷೇತ್ರದ ಚಿಕ್ಕ ಬೈರತಿ ಗ್ರಾಮದಿಂದ ಪ್ರಾರಂಭವಾದ ಚುನಾವಣಾ ಪ್ರಚಾರ ಬೈರತಿ, ಬಂಡೆ ಹೊಸೂರು, ಮಿಟ್ಟಿಗಾನಹಳ್ಳಿ, ಕಾಡುಸೊಣ್ಣಪ್ಪನ ಹಳ್ಳಿ, ಚಿಕ್ಕಗುಬ್ಬಿ, ಯರ›ಪ್ಪನಹಳ್ಳಿ, ಕಾಡ ಅಗ್ರಹಾರ, ಬೊಮ್ಮಸಂದ್ರ, ದೊಡ್ಡಗುಬ್ಬಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಂಜುಳಾ ಮತಯಾಚಿಸಿದರು.

15 ವರ್ಷಗಳಿಂದ ನನ್ನ ಪತಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ನಾವಿಬ್ಬರೂ ಡಬಲ್ ಇಂಜಿನ್ ಸರ್ಕಾರದಂತೆ ನಿಮ್ಮ ಮನೆ ಮಗಳಾಗಿ ಸೇವೆ ಸಲ್ಲಿಸಲು ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net