

ಮದ್ದೂರು: ಶ್ರೀ ಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರ ಸಂಘ ಪಾರದರ್ಶಕವಾಗಿ ನಡೆಯುವ ಮೂಲಕ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿರುವುದು ಮೆಚ್ಚುಗೆಯ ವಿಷಯವಾಗಿದ್ದು, ಸಂಘದ ನೂತನ ಕಟ್ಟಡಕ್ಕೆ ನೆರವು ನೀಡಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಭರವಸೆ ನೀಡಿದರು.
ನಗರದ ಶ್ರೀ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ಹಾಗೂ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಲೂಕಿನಲ್ಲಿ 22 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಜನರಿದ್ದಾರೆ. ಆದ್ದರಿಂದ ಭವನ ನಿರ್ಮಾಣ ಹಾಗೂ ನಗರ ವ್ಯಾಪ್ತಿಯಲ್ಲಿರುವ ಸ್ಮಶಾನ ಮತ್ತು ರಸ್ತೆ ಅಭಿವೃದ್ಧಿಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಶ್ರೀ ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಸಹಕಾರ ತತ್ವದಡಿಯಲ್ಲಿ ಜಗಜ್ಯೋತಿ ಬವೇಶ್ವರ ಸಂಘ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇದರಿಂದ ಸಂಘದ ಸದಸ್ಯರಿಗೆ ಹಲವು ರೀತಿಯಲ್ಲಿ ಆರ್ಥಿಕವಾಗಿ ಅನುಕೂಲವಾ ಗುತ್ತಿರುವುದು ಸಂತೋಷದ ವಿಷಯ ಎಂದರು.
ಸಂಘದ ಅಧ್ಯಕ್ಷ ಪಿ.ರಾಜಶೇಖರ್ ಮಾತನಾಡಿ, ಸಂಘದ ನಿರ್ದೇಶಕರು ಹಾಗೂ ಷೇರುದಾರರ ಸಹಕಾರದಿಂದ ಸಂಘವು ಲಾಭದಾಯಕವಾಗಿ ನಡೆಯುತ್ತಿದ್ದು, ಶೀಘ್ರ ಸಂಘದ ಕಟ್ಟಡ ಪೂರ್ಣಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಬಿವೃದ್ಧಿಯತ್ತ ಸಂಘವನ್ನು ಕೊಡಯ್ಯಲಾಗುವುದು ಎಂದರು.
ಸಂಘದ ಮಾಜಿ ಅಧ್ಯಕ್ಷ ಬಿ.ವಿ.ಮಂಜುನಾಥ್ ಮಾತನಾಡಿದರು. ಎಸ್.ಐ.ಹೊನ್ನಲಗೆರೆ ಶಿವ ಕ್ಷೇತ್ರ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಜಗಜ್ಯೋತಿ ಬಸವೇಶ್ವರ ಪತ್ತಿನ ಸಂಘದ ಉಪಾಧ್ಯಕ್ಷ ಸಿದ್ದಲಿಂಗಪ್ರಸಾದ್, ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ರಾಜಮಣಿ, ಎಸ್.ವ್ಯಾಸ ವಿಶ್ವವಿದ್ಯಾಲಯ ಕುಲಾಧಿಪತಿ ಡಾ.ಎಚ್.ಆರ್.ದಯಾನಂದ್ ಸ್ವಾಮಿ, ಉದ್ಯಮಿಗಳಾದ ಕೆ.ಎಚ್.ವೀರಭದ್ರಪ್ಪ, ಎಂ.ಆರ್.ಉಮಾಪತಿ, ಸಹಕಾರ ಇಲಾಖೆಯ ಎಚ್.ಆರ್.ನಾಗಭೂಷಣ್ ಇತರರಿದ್ದರು.