ಸನಾತನ ಧರ್ಮ ಅತ್ಯಂತ ಶ್ರೇಷ್ಠ

ಕೆ.ಎಂ.ದೊಡ್ಡಿಯ ವೆಂಕಟೇಶ್ವರ ದೇವಾಲಯದಲ್ಲಿ ಶ್ರೀ ವೆಂಕಟೇಶ್ವರ ಸೇವಾ ಸಮಿತಿಯಿಂದ ಆಯೋಜಿಸಿದ್ದ ವೈಕುಂಠ ಏಕಾದಶಿ ಕಾರ್ಯಕ್ರಮದಲ್ಲಿ ಡಾ.ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಅವರನ್ನು ಅಭಿನಂದಿಸಲಾಯಿತು. ಮಣಿ, ವೆಂಕಟೇಶ್, ವೆಂಕಟೇಗೌಡ, ನಾಗರಾಜು, ವೆಂಕಟೇಶ್,ನಾಗರಾಜು ಇದ್ದರು.
ಕೆ.ಎಂ.ದೊಡ್ಡಿಯ ವೆಂಕಟೇಶ್ವರ ದೇವಾಲಯದಲ್ಲಿ ಶ್ರೀ ವೆಂಕಟೇಶ್ವರ ಸೇವಾ ಸಮಿತಿಯಿಂದ ಆಯೋಜಿಸಿದ್ದ ವೈಕುಂಠ ಏಕಾದಶಿ ಕಾರ್ಯಕ್ರಮದಲ್ಲಿ ಡಾ.ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಅವರನ್ನು ಅಭಿನಂದಿಸಲಾಯಿತು. ಮಣಿ, ವೆಂಕಟೇಶ್, ವೆಂಕಟೇಗೌಡ, ನಾಗರಾಜು, ವೆಂಕಟೇಶ್,ನಾಗರಾಜು ಇದ್ದರು.
Published on
ಕೆ.ಎಂ.ದೊಡ್ಡಿ: ಸನಾತನ ಧರ್ಮ ಅತ್ಯಂತ ಶ್ರೇಷ್ಠವಾಗಿದ್ದು, ತನ್ನದೇ ಆದ ಪರಂಪರೆ ಹೊಂದಿದೆ ಎಂದು ಕೆಂಗೇರಿಯ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.
ವೆಂಕಟೇಶ್ವರ ದೇವಾಲಯದಲ್ಲಿ ಮಂಗಳವಾರ ಶ್ರೀ ವೆಂಕಟೇಶ್ವರ ಸೇವಾ ಸಮಿತಿಯಿಂದ ಆಯೋಜಿಸಿದ್ದ ವೈಕುಂಠ ಏಕಾದಶಿ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ವೈಕುಂಠ ಏಕಾದಶಿ ಅತ್ಯಂತ ಪವಿತ್ರವಾದುದು. ಈ ದಿನದಂದು ಶ್ರೀನಿವಾಸನ ದರ್ಶನ ಪಡೆದರೆ ಒಳ್ಳೆಯದಾಗುತ್ತದೆ. ಜನತೆ ದೂರದ ತಿರುಪತಿಗೆ ಹೋಗಲು ಕಷ್ಟವಿದೆ. ಅದನ್ನು ನೀಗಿಸುವಲ್ಲಿ ಶ್ರೀವೆಂಕಟೇಶ್ವರ ಸೇವಾ ಸಮಿತಿ ದಾನಿಗಳ ಸಹಕಾರದಿಂದ ಉತ್ತಮ ದೇವಾಲಯ ನಿರ್ಮಾಣ ಮಾಡಿದೆ. ದೇವಾಲಯ ಸುಂದರವಾಗಿದ್ದು, ಇಲ್ಲಿ ಬರುವ ಭಕ್ತರಿಗೆ ನೆಮ್ಮದಿ ಸಿಗುತ್ತದೆ ಎಂದು ಹೇಳಿದರು.
ಮನುಷ್ಯ ನೆಮ್ಮದಿಯಾಗಿ ಬದುಕಬೇಕೆಂದರೆ, ಬೇರೆಯವರಿಗೆ ಕೆಡುಕು ಮಾಡಬಾರದು. ನಮ್ಮಿಂದ ಸಾಧ್ಯವಾದರೆ ಒಳ್ಳೆಯದು ಮಾಡಬೇಕು. ಆಗದಿದ್ದರೆ ಸುಮ್ಮನೆ ಇದ್ದರೆ ಅದು ಕೂಡ ಒಳ್ಳೆಯದು. ಆ ನಿಟ್ಟಿನಲ್ಲಿ ಎಲ್ಲರೂ ನಡೆದುಕೊಳ್ಳಬೇಕು ಎಂದು ಹೇಳಿದರು.
ವೈಕುಂಠ ಏಕಾದಶಿ ಪ್ರಯುಕ್ತ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸುತ್ತಲ ಗ್ರಾಮಗಳ ಜನರು ಆಗಮಿಸಿ ದೇವರ ದರ್ಶನ ಪಡೆದರು.
ಚಾಂಷುಗರ್ಸ್ ಕಾರ್ಖಾನೆಯ ಹಿರಿಯ ಉಪಾಧ್ಯಕ್ಷ ಮಣಿ, ವೆಂಕಟೇಶ್ವರ ಸೇವಾ ಸಮಿತಿ ಕಾರ್ಯಾಧ್ಯಕ್ಷ ವೆಂಕಟೇಶ್, ಅಧ್ಯಕ್ಷ ವೆಂಕಟೇಗೌಡ, ಕಾರ್ಯದರ್ಶಿ ನಾಗರಾಜು, ದೇವರಹಳ್ಳಿ ವೆಂಕಟೇಶ್, ಕೆ.ಶೆಟ್ಟಹಳ್ಳಿ ನಾಗರಾಜು, ಶೀನಾ ಕೆಂಚೇಗೌಡ, ಅಣ್ಣೂರು ಯೋಗೇಂದ್ರ, ಪುಟ್ಟಸ್ವಾಮಿ, ಚಂದೂಪುರ ಶಿವಲಿಂಗೇಗೌಡ ಮತ್ತಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net