ಮಾಧ್ಯಮದೊಂದಿಗೆ ಮಾತನಾಡಿದ ವಿದ್ಯಾರ್ಥಿಗಳು, ಐತಿಹಾಸಿಕ ಮಹತ್ವದ ದೇಗುಲವನ್ನು ಸ್ವಚ್ಛವಾಗಿಡಬೇಕು. ಇದಕ್ಕೆ ದೇವಾಲಯದ ಅಧಿಕಾರಿಗಳು ಕ್ರಮವಹಿಸಬೇಕು. ಬೆಂಗಳೂರಿಗೆ ತೆರಳಿದ ನಂತರ ಮುಜರಾಯಿ ಇಲಾಖೆ ಆಯುಕ್ತರು ಹಾಗೂ ಸಚಿವರಿಗೂ ಮನವಿ ಮಾಡುತ್ತೇವೆ. ಪುರಾತನ ದೇಗುಲಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ಈ ಮಾದರಿಯ ನಿರ್ಲಕ್ಷ್ಯ ಸಲ್ಲದು. ರಾಜ್ಯ ಪುರಾತತ್ವ ಇಲಾಖಾ ಅಧಿಕಾರಿಗಳು ತಕ್ಷಣ ಕ್ರಮ ವಹಿಸಬೇಕಾದ ತುರ್ತು ಅಗತ್ಯವಿದೆ ಎಂದು ತಿಳಿಸಿದರು.