ಅನ್ನಭಾಗ್ಯ ಯೋಜನೆಯಡಿ 2,14,852 ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮೂಲಕ 69.40 ಕೋಟಿ ರೂ ವರ್ಗಾವಣೆ ಮಾಡಲಾಗಿದೆ. ಇದುವರೆಗೂ 1,71,700 ಕ್ವಿಂಟಾಲ್ ಆಹಾರ ಧಾನ್ಯ ವಿತರಣೆ ಮಾಡಲಾಗಿದ್ದು, ಇದರ ಮೊತ್ತ 39.49 ಕೋಟಿ ರೂ ಆಗಿದೆ. ಗೃಹಜ್ಯೋತಿ ಯೋಜನೆಯಡಿ 72,720 ಫಲಾನುಭವಿಗಳಿಗೆ ಮಾಸಿಕ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಇದಕ್ಕೆ ಖರ್ಚಾಗಿರುವ 83.73 ಕೋಟಿ ರೂಗಳನ್ನು ಸೆಸ್ಕ್‌ಗೆ ಸರ್ಕಾರ ಭರಿಸಿದೆ. ಅಂತೆಯೇ ಗೃಹಲಕ್ಷ್ಮಿ ಯೋಜನೆಯಡಿ 74,495 ಫಲಾನುಭವಿಗಳು ನೋಂದಣಿಯಾಗಿದ್ದು, ಇವರಿಗೆ ಮಾಸಿಕ 2 ಸಾವಿರ ರೂ.ಗಳಂತೆ 380.43 ಕೋಟಿ ರೂ.ಗಳನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ ಎಂದು ಹೇಳಿದರು.