ಕ್ರೀಡಾಕೂಟದಲ್ಲಿ ಸಂಭ್ರಮಿಸಿದ ಪಾಲಕರು

 ಮದ್ದೂರು ನಗರದ ತಾಲೂಕು ಕ್ರೀಡಾಂಗಣದಲ್ಲಿ ಶ್ರೀ ಸರ್ವಶಿವ ಎಜುಕೇಷನಲ್ ಟ್ರಸ್ಟ್ ಗ್ಲೋಬಲ್ ಇಂಟರ್‌ನ್ಯಾಷನಲ್ ಶಾಲೆ ವತಿಯಿಂದ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಪಾಲಕರು ಭಾಗವಹಿಸಿದ್ದರು.
ಮದ್ದೂರು ನಗರದ ತಾಲೂಕು ಕ್ರೀಡಾಂಗಣದಲ್ಲಿ ಶ್ರೀ ಸರ್ವಶಿವ ಎಜುಕೇಷನಲ್ ಟ್ರಸ್ಟ್ ಗ್ಲೋಬಲ್ ಇಂಟರ್‌ನ್ಯಾಷನಲ್ ಶಾಲೆ ವತಿಯಿಂದ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಪಾಲಕರು ಭಾಗವಹಿಸಿದ್ದರು.
Published on
ಮದ್ದೂರು: ನಗರ ಸರ್ಕಾರಿ ತಾಲೂಕು ಕ್ರೀಡಾಂಗಣದಲ್ಲಿ ಶ್ರೀ ಸರ್ವಶಿವ ಎಜುಕೇಷನಲ್ ಟ್ರಸ್ಟ್ ಗ್ಲೋಬಲ್ ಇಂಟರ್‌ನ್ಯಾಷನಲ್ ಶಾಲೆ ವತಿಯಿಂದ ಪಾಲಕರಿಗೆ ಭಾನುವಾರ ವಿವಿಧ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಮಹಿಳೆಯರು ಮತ್ತು ಪುರಷರಿಗೆ ವಿವಿಧ ಸ್ಪರ್ಧೆಗಳು ನಡೆದವು. 100ಮೀ. ಓಟ, ಬ್ಯಾಲೆನ್ಸಿಂಗ್ ಇನ್ ದ ಬಾಲ್, ಮ್ಯೂಸಿಕಲ್ ಚೇರ್, ಸರ್ಚಿಂಗ್ ಇನ್ ದ ಥಿಂಗ್ಸ್ ಮತ್ತಿತರ ಕ್ರೀಡೆಗಳು ನಡೆದವು.
ಸಂಸ್ಥೆಯ ಅಧ್ಯಕ್ಷ ಶಿವನಂಜಯ್ಯ, ಉಪಾಧ್ಯಕ್ಷ ಚಂದ್ರನಾಯಕ್, ನಿರ್ದೇಶಕಿ ಬಿ.ಸಿ.ಸರ್ವಮಂಗಳಾ, ಸಿಇಒ ಎಂ.ಎಸ್. ಸಂತೋಷ್‌ಗೌಡ, ಮುಖ್ಯ ಶಿಕ್ಷಕಿ ಎ.ವಿ.ಪಾವನಾ, ಶಿಕ್ಷಕರಾದ ವಿ.ಟಿ.ಮೀನಾ, ಸಿಂಧು, ಕಾಂಚನಾ, ಜ್ಯೋತಿ, ಸುನಂದಾ, ಸುಮಯ್ಯ ಬಾನು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net