ದೇವಾಲಯದ ಸಿಸಿ ಕ್ಯಾಮರಾ ಕಳವು ಪ್ರಕರಣದ ನಂತರ ಆರು ಜನ ನೌಕರರನ್ನು ಅಮಾನತು ಮಾಡಿದ ಬಳಿಕ ಮೊದಲ ಬಾರಿಗೆ ಮಂಗಳವಾರ ಹುಂಡಿ ಎಣಿಕೆ ಕಾರ್ಯ ನಡೆಯಿತು. ಮಾರ್ಚ್‌ನಲ್ಲಿ ನಡೆದ ವೈರಮುಡಿ ಜಾತ್ರಾ ಮಹೋತ್ಸವದ ವೇಳೆ 11ಲಕ್ಷ ರೂ.ಹುಂಡಿ ಹಣ ಸಂಗ್ರಹವಾಗಿತ್ತು. ಇದೀಗ 17 ಲಕ್ಷ ರೂ. ಕಾಣಿಕೆ ಸಂಗ್ರಹವಾಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೇವಾಲಯಗಳಲ್ಲಿ ಹುಂಡಿ ಎಣಿಕೆ ಕಾರ್ಯವನ್ನು ಪಾರದರ್ಶಕವಾಗಿ ನಡೆಸುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕನಗೋನಹಳ್ಳಿ ಪರಮೇಶ್‌ಗೌಡ ಹಾಗೂ ಸಮಿತಿ ಸದಸ್ಯರು ಖುದ್ದು ಹಾಜರಿದ್ದು, ಎಣಿಕೆ ಕಾರ್ಯ ಮುಗಿಯುವವರೆಗೂ ಸ್ಥಳದಲ್ಲಿದ್ದರು.