ಮಾದೇಗೌಡರಿಗೆ ಕುಟುಂಬ ರಾಜಕಾರಣದ ವ್ಯಾಮೋಹವಿರಲಿಲ್ಲ

 ಕೆ.ಎಂ.ದೊಡ್ಡಿಯ ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಭಾರತೀ ವಿದ್ಯಾಸಂಸ್ಥೆ, ಮಧು ಜಿ.ಮಾದೇಗೌಡ ಅಭಿಮಾನಿ ಬಳಗ ಆಯೋಜಿಸಿದ್ದ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡರ ಹುಟ್ಟುಹಬ್ಬ ಕಾರ್ಯಕ್ರಮವನ್ನು ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷರಾದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು.
ಕೆ.ಎಂ.ದೊಡ್ಡಿಯ ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಭಾರತೀ ವಿದ್ಯಾಸಂಸ್ಥೆ, ಮಧು ಜಿ.ಮಾದೇಗೌಡ ಅಭಿಮಾನಿ ಬಳಗ ಆಯೋಜಿಸಿದ್ದ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡರ ಹುಟ್ಟುಹಬ್ಬ ಕಾರ್ಯಕ್ರಮವನ್ನು ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷರಾದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು.
Published on
ಕೆ.ಎಂ.ದೊಡ್ಡಿ: ಮಾಜಿ ಸಂಸದ ದಿವಂಗತ ಜಿ.ಮಾದೇಗೌಡರಿಗೆ ಕುಟುಂಬ ರಾಜಕಾರಣದ ವ್ಯಾಮೋಹವಿದ್ದರೆ 15 ವರ್ಷಗಳ ಹಿಂದೆಯೇ ಮಧು ಜಿ.ಮಾದೇಗೌಡ ಮಂತ್ರಿಯಾಗಿರುತ್ತಿದ್ದರು ಎಂದು ಕೆಂಗೇರಿಯ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ತಿಳಿಸಿದರು.
ಇಲ್ಲಿಯ ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಭಾರತೀ ವಿದ್ಯಾ ಸಂಸ್ಥೆ, ಮಧು ಜಿ.ಮಾದೇಗೌಡ ಅಭಿಮಾನಿ ಬಳಗ ಆಯೋಜಿಸಿದ್ದ ವಿಧಾನಪರಿಷತ್ ಸದಸ್ಯ ಮಧು ಜಿ.ಮಾದೇಗೌಡರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾದೇಗೌಡರಿಗೆ ತಮ್ಮ ಪುತ್ರ ಮಧು ಜಿ.ಮಾದೇಗೌಡರನ್ನು ರಾಜಕೀಯಕ್ಕೆ ತರಬೇಕೆಂಬ ಆಸೆ ಇರಲಿಲ್ಲ. ಕುಟುಂಬ ರಾಜಕಾರಣದ ದಾಹ ಇದ್ದಿದ್ದರೆ ಅವರು ಅಧಿಕಾರದಲ್ಲಿದ್ದಾಗಲೇ ತಮ್ಮ ಪುತ್ರನಿಗೆ ಹಲವು ಅಧಿಕಾರ ಕೊಡಿಸಬಹುದಿತ್ತು. ಅವರಿಗೆ ಕುಟುಂಬ ರಾಜಕೀಯ ಕಿಂಚಿತ್ತೂ ಇಷ್ಟವಿರಲಿಲ್ಲ. ಕುಗ್ರಾಮ ಕಾಳಮುದ್ದನದೊಡ್ಡಿಯಲ್ಲಿ ಕಾರ್ಖಾನೆ, ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆ ಸ್ಥಾಪಿಸಿ ಒಂದು ನಗರವಾಗಿ ರೂಪಿಸಿದ ಕೀರ್ತಿ ಜಿ.ಮಾದೇಗೌಡ ಅವರಿಗೆ ಸಲ್ಲಬೇಕು. ಗೌಡರ ಹೆಸರು ಸೂರ್ಯ ಚಂದ್ರ ಇರುವವರೆಗೂ ಪಸರಿಸುತ್ತದೆ ಎಂದು ಹೇಳಿದರು.
ಜಿ.ಮಾದೇಗೌಡ ಅವರು ಗಾಂಧಿ ಆಶಯಗಳನ್ನು ಇಂದಿನ ಯುವ ಸಮುದಾಯಕ್ಕೆ ತೋರಿಸುವ ನಿಟ್ಟಿನಲ್ಲಿ ತಮ್ಮ ಇಳಿವಯಸ್ಸಿನವರೆಗೂ ಗಾಂಧಿ ಗ್ರಾಮಕ್ಕಾಗಿ ಹೋರಾಟ ಮಾಡಿ ನಿವೇಶನ ಪಡೆದರು. ಗಾಂಧಿ ಗ್ರಾಮದ ಪರಿಕಲ್ಪನೆಯನ್ನು ಮಧು ಜಿ.ಮಾದೇಗೌಡ ಹೊತ್ತು ತಂದೆಯ ಆಸೆಯನ್ನು ಈಡೇರಿಸುವತ್ತ ದಾಪುಗಾಲು ಹಾಕುತ್ತ ತಂದೆಗೆ ತಕ್ಕ ಮಗ ಎನಿಸಿಕೊಂಡಿದ್ದಾರೆ ಎಂದರು.
ಮಂಡ್ಯದ ಕೆ.ವಿ. ಶಂಕರೇಗೌಡ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಡಾ.ಎಸ್.ಬಿ.ಶಂಕರೇಗೌಡ, ಕೊಮ್ಮೇರಹಳ್ಳಿ ವಿಶ್ವಮಾನವ ಕ್ಷೇತ್ರದ ಶ್ರೀ ಪುರುಷೋತ್ತಮನಂದನಾಥ ಸ್ವಾಮೀಜಿ, ಭಾರತೀ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಬಿ.ಎಂ.ನಂಜೇಗೌಡ, ಪಾಂಶುಪಾಲ ಡಾ.ಎಸ್.ಬಿ.ಮಹದೇವ ಸ್ವಾಮಿ, ಬಿಂದು ಮಧು ಉಪಸ್ಥಿತರಿದ್ದರು. ಹುಟ್ಟು ಹಬ್ಬದ ಅಂಗವಾಗಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ವಿಧಾನ ಪರಿಷತ್ ಸದಸ್ಯನಾಗಿ 3 ವರ್ಷ ಉರುಳಿದ್ದು ಇನ್ನು ಮೂರು ವರ್ಷ ಬಾಕಿ ಇದೆ. ನಂತರ 5 ವರ್ಷಕ್ಕೆ ನಿಮ್ಮ ಆರ್ಶೀವಾದ ಬೆಂಬಲ ಬೇಕು ಎನ್ನುವ ಮೂಲಕ ಎಂಎಲ್ಸಿ ಮಧು ಜಿ.ಮಾದೇಗೌಡ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದರು.
ನಮ್ಮ ಸಂಸ್ಥೆಯ ಸಿಬ್ಬಂದಿ ಪರಿಶ್ರಮ ಮತ್ತು ಅವರು ನೀಡಿದ ಮತ ಭಿಕ್ಷೆಯಿಂದ ನಾನು ವಿಧಾನ ಪರಿಷತ್ ಸದಸ್ಯನಾಗಿ ನಿಮ್ಮ ಸೇವೆ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಬೆಂಬಲ ನೀಡಬೇಕು. ನಾನು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಸಾಧಿಸಿದ್ದು ನಗರ ಪ್ರದೇಶದಂತೆ ಮತ್ತಷ್ಟು ಸಾಧಿಸಬೇಕೆಂಬ ಛಲವಿದೆ. ಆದರೆ, ರಾಜಕೀಯದಲ್ಲಿ ಮಾತ್ರ ನಾನು 1ನೇ ತರಗತಿಯಲ್ಲಿದ್ದು ಏನೂ ಸಾಧಿಸಿಲ್ಲ. ಅದರಲ್ಲಿ ಇನ್ನು ಸಾಧಿಸಬೇಕಾದದ್ದು ಬಹಳಷ್ಟಿದ್ದು ಅದಕ್ಕೆ ನೀವು ನನಗೆ ಹೆಚ್ಚಿನ ಬಲ ನೀಡಬೇಕು ಎಂದು ಕೋರಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net