ಬೆಂಗಳೂರಿನ ಮರಿಯಪ್ಪನ ಪಾಳ್ಯ, ಸಾವಂದಿಪುರ, ಸಾಮಂದಿಪುರ ಅರೆಕಲ್‌ದೊಡ್ಡಿ, ಕಳ್ಳಮೆಳೆದೊಡ್ಡಿ, ಮುಟ್ಟನಹಳ್ಳಿ, ಗುರುದೇವರಹಳ್ಳಿ, ಗುವ್ವಾಪುರ, ಹಾಡ್ಲಿ, ಯಡಗನಹಳ್ಳಿ, ಕಡಿಲುವಾಗಿಲು, ಆಲದಹಳ್ಳಿ, ಮಾದರಹಳ್ಳಿ, ಮಂಡ್ಯ ಹೊಸಹಳ್ಳಿ, ದೇವರಹಳ್ಳಿ, ಕೆ.ಪಿ. ದೊಡ್ಡಿ, ಮೈಸೂರು, ಎಲೆತೋಟದಹಳ್ಳಿ, ಉಪ್ಪಗೆರೆದೊಡ್ಡಿ, ಕಾಡುಕೊತ್ತನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಂದ ದೇವರ ಕುಲದವರು ಆಗಮಿಸಲಿದ್ದಾರೆ. ಈ ವರ್ಷವೂ ಅರೇಚಾಕನಹಳ್ಳಿ ಗ್ರಾಮದಲ್ಲಿ ಶ್ರೀ ಭೈರವೇಶ್ವರಸ್ವಾಮಿ ಮತ್ತು ಶ್ರೀ ಶಂಭುಲಿಂಗೇಶ್ವರ ಸ್ವಾಮಿ ಮತ್ತು ಶ್ರೀ ದೇವಮ್ಮ ಕದಗಾರಲಿಂಗೇಶ್ವರ ಮತ್ತು ಶ್ರೀ ಮಾರಮ್ಮ, ಶ್ರೀ ಶನಿದೇವರುಗಳ ಬಿರುದುಗಳು ಮತ್ತು ವಿಶೇಷ ಪೂಜಾ ಮಹೋತ್ಸವ, ಬಸಪ್ಪಗಳ ಮೆರವಣಿಗೆಯನ್ನು ಏರ್ಪಡಿಸಲಾಗಿದೆ.