ಜನರಲ್ಲಿ ತಪ್ಪು ತಿಳಿವಳಿಕೆ ಮೂಡಿಸುವುದು ಸರಿಯಲ್ಲ

ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿ ಡಾಂಬರ್ ರಸ್ತೆಯನ್ನು ಮೇಲ್ದರ್ಜೆಗೇರಿಸಿರುವುದು ಮತ್ತು ಆರ್.ಸಿ.ಸಿ. ಬದಿ ಚರಂಡಿ ನಿರ್ಮಿಸುವ 5.73 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಎಂ.ಉದಯ್ ಚಾಲನೆ ನೀಡಿದರು. ಚಲುವರಾಜು, ಪಿ.ಸಂದರ್ಶ, ಹರೀಶ್‌ಬಾಬು, ಕಂಠಿಸುರೇಶ್, ರಾಘವ, ಮೋಹನ್‌ಕುಮಾರ್ ಇದ್ದರು.
ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿ ಡಾಂಬರ್ ರಸ್ತೆಯನ್ನು ಮೇಲ್ದರ್ಜೆಗೇರಿಸಿರುವುದು ಮತ್ತು ಆರ್.ಸಿ.ಸಿ. ಬದಿ ಚರಂಡಿ ನಿರ್ಮಿಸುವ 5.73 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಎಂ.ಉದಯ್ ಚಾಲನೆ ನೀಡಿದರು. ಚಲುವರಾಜು, ಪಿ.ಸಂದರ್ಶ, ಹರೀಶ್‌ಬಾಬು, ಕಂಠಿಸುರೇಶ್, ರಾಘವ, ಮೋಹನ್‌ಕುಮಾರ್ ಇದ್ದರು.
Published on
ಮದ್ದೂರು: ಪುರಸಭೆಯಾಗಿದ್ದ ಮದ್ದೂರು ಪಟ್ಟಣವನ್ನು ನಗರಸಭೆಯನ್ನಾಗಿ ಮಾಡಲಾಗಿದೆ. ಆದರೆ ಈ ವಿಷಯವನ್ನು ಕೆಲವರು ತಿರುಚಿ ಅನರ್ಥಗಳನ್ನು ಜನರಲ್ಲಿ ತಪ್ಪು ತಿಳಿವಳಿಕೆ ಸೃಷ್ಟಿ ಮಾಡಿ ಪ್ರತಿಭಟನೆ ನಡೆಸುತ್ತಿರುವುದು ಸರಿಯಲ್ಲ. ಇದನ್ನೆಲ್ಲ ಜನರು ಗಮನಿಸುತ್ತಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿ ಡಾಂಬರ್ ರಸ್ತೆಯನ್ನು ಮೇಲ್ದರ್ಜೇಗೇರಿಸಿರುವುದು ಮತ್ತು ಆರ್.ಸಿ.ಸಿ. ಬದಿ ಚರಂಡಿ ನಿರ್ಮಿಸುವ 5.73 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಿರುವುದು ಅಭಿವೃದ್ಧಿ ಮಾಡುವ ಉದ್ದೇಶದಿಂದ. ರಾಜ್ಯದಲ್ಲಿ ಸುಮಾರು 60 ಶಾಸಕರು ನಗರಸಭೆ ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಅದರಲ್ಲಿ 3 ಶಾಸಕರಿಗೆ ಮಾತ್ರ ಅವಕಾಶ ಕೊಟ್ಟಿದ್ದರೆ. ಇದರಲ್ಲಿ ನನ್ನ ನಿರಂತರ ಪರಿಶ್ರಮವಿದೆ ಎಂದರು.
ಕೈಗಾರಿಕಾ ಪ್ರದೇಶದ ಅಭಿವೃದ್ಧಿಯಾದರೆ ಸಾವಿರಾರು ಮಂದಿಗೆ ಕೆಲಸ ಸಿಗುತ್ತದೆ. ಅವರಿಗೆ ಜೀವನ ಸಿಗುತ್ತದೆ. ಆದ್ದರಿಂದ ಕೈಗಾರಿಕಾ ಪ್ರದೇಶಕ್ಕೆ ಅಗತ್ಯ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿದರೆ ತಾಲೂಕಿನ ಜನರಿಗೆ ಅನುಕೂಲವಾಗಲಿದೆ ಎಂದರು.
ಡಿಸಿಸಿ ಉಪಾಧ್ಯಕ್ಷ ಚಲುವರಾಜು, ನಿರ್ದೇಶಕ ಪಿ.ಸಂದರ್ಶ್, ಮನ್‌ಮಲ್ ನಿರ್ದೇಶಕ ಹರೀಶ್‌ಬಾಬು, ಜಿಪಂ ಮಾಜಿ ಅಧ್ಯಕ್ಷ ಕಂಠಿಸುರೇಶ್, ಗ್ರಾ.ಪಂ. ಮಾಜಿ ಅಧ್ಯಕ್ಷ ಹರೀಶ್ ಮುಖಂಡರಾದ ದೇಶಹಳ್ಳಿ ಮೋಹನ್‌ಕುಮಾರ್, ಅಜ್ಜಹಳ್ಳಿ ರಾಮಕೃಷ್ಣ, ಮಮತಾ ಶಂಕರೇಗೌಡ, ರಾಘವ, ಪುಟ್ಟರಾಜು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net