ಸಂಭ್ರಮದ ಹನುಮಂತೋತ್ಸವ

ಕಿಕ್ಕೇರಿ ವಿಪ್ರ ಬಾಂಧವ ಸೇವಾ ಸಮಿತಿಯಿಂದ ಭಾನುವಾರ ಹನುಮಂತೋತ್ಸವದಲ್ಲಿ ಬಣ್ಣ ಹಚ್ಚಿ ಓಕುಳಿಯೊಂದಿಗೆ ಸಂಭ್ರಮಿಸಿದರು.
ಕಿಕ್ಕೇರಿ ವಿಪ್ರ ಬಾಂಧವ ಸೇವಾ ಸಮಿತಿಯಿಂದ ಭಾನುವಾರ ಹನುಮಂತೋತ್ಸವದಲ್ಲಿ ಬಣ್ಣ ಹಚ್ಚಿ ಓಕುಳಿಯೊಂದಿಗೆ ಸಂಭ್ರಮಿಸಿದರು.
Published on
ಕಿಕ್ಕೇರಿ: ಇಲ್ಲಿನ ವಿಪ್ರ ಬಾಂಧವ ಸೇವಾ ಸಮಿತಿ ವತಿಯಿಂದ ಭಾನುವಾರ ಹನುಮಂತೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಉತ್ಸಾಹದಿಂದ ಹಿರಿಯರು, ಕಿರಿಯರು, ಯುವಕರು, ಯುವತಿಯರು ಎನ್ನದೆ ಎಲ್ಲರೂ ಬಣ್ಣದ ಓಕುಳಿಯಾಡಿ ಸಂಭ್ರಮಿಸಿದರು. ಮೆರವಣಿಗೆ ತುಂಬ ವಾನರ ಸೇನೆಯಂತೆ ಬಣ್ಣ ಹಚ್ಚಿಕೊಂಡು ಕುಣಿಯುತ್ತಿದ್ದ ಯುವಕರು, ಹಿರಿಯರು, ಪುಟಾಣಿಗಳ ಆನಂದ ನೋಡುಗರಿಗೆ ಖುಷಿ ನೀಡಿತು. ಹನುಮ ದೇವರ ಉತ್ಸವ ಅದ್ದೂರಿಯಾಗಿ ಸಾಗಿದಾಗ ಭಕ್ತರು ತಮ್ಮ ಮನೆ ಮುಂದೆ ಆಗಮಿಸಿದ ದೇವರಿಗೆ ಹಣ್ಣು, ಕಾಯಿ ಅರ್ಪಿಸಿ ಪೂಜಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ರಜೆಯ ಮಜೆಯಲ್ಲಿದ್ದ ಮಕ್ಕಳು ಬಣ್ಣದ ಓಕುಳಿಯಾಡಲು ಕಾದು ಕುಳಿತಿದ್ದರು. ಮನೆಯ ಮುಂದೆ ಬಕೆಟ್, ಬಿಂದಿಗೆಯಲ್ಲಿದ್ದ ಅರಿಶಿಣ, ಕೆಂಪು, ನೀಲಿ, ಹಸಿರು ಸೇರಿದಂತೆ ವಿವಿಧ ವರ್ಣದ ನೀರನ್ನು ಪೈಪೋಟಿಯಲ್ಲಿ ಎರಚಾಡಿದರು. ದಾರಿಯುದ್ದಕ್ಕೂ ಭಲೇ ಭಲೇ ಹನುಮ, ಭಜರಂಗಿ ಹನುಮ ಎಂದು ಘೋಷಣೆ ಕೂಗುತ್ತ ಸಾಗಿದರು.
ಕೆ.ಬಿ.ವೆಂಕಟೇಶ್, ನರಸಿಂಹ, ಕೆ.ಎಸ್.ಪ್ರಭಾಕರ್, ಮಹಬಲಶರ್ಮ, ಕೆ.ಎಸ್.ಪರಮೇಶ್ವರಯ್ಯ, ಶ್ರೀಹರಿ, ರಘು ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net