ಕಾನೂನುಬಾಹಿರ ದಸ್ತಾವೇಜು ತಯಾರಕರಿಗೆ ಕಡಿವಾಣ ಹಾಕಿ

ಕೆ.ಆರ್.ಪೇಟೆಯಲ್ಲಿ ಪತ್ರ ಬರಹಗಾರರ ಸಂಘದ ಸದಸ್ಯರು ಶಾಸಕ ಎಚ್.ಟಿ.ಮಂಜು ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪಿ.ಎಸ್.ಶಿವಲಿಂಗೇಗೌಡ, ಕೆ.ಎಸ್.ನಾಗರಾಜು, ಕಾರ್ಯದರ್ಶಿ ಕೆ.ಆರ್.ಹರೀಶ್‌ಕುಮಾರ್, ಸಹ ಕಾರ್ಯದರ್ಶಿ ಟಿ.ನರಸಿಂಹಮೂರ್ತಿ, ಶಂಕರ್‌ನಾಗ್, ಮುರುಗೇಶ್, ಕೆ.ಸಿ.ವೆಂಕಟರಾಮು ಇತರರಿದ್ದರು.
ಕೆ.ಆರ್.ಪೇಟೆಯಲ್ಲಿ ಪತ್ರ ಬರಹಗಾರರ ಸಂಘದ ಸದಸ್ಯರು ಶಾಸಕ ಎಚ್.ಟಿ.ಮಂಜು ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪಿ.ಎಸ್.ಶಿವಲಿಂಗೇಗೌಡ, ಕೆ.ಎಸ್.ನಾಗರಾಜು, ಕಾರ್ಯದರ್ಶಿ ಕೆ.ಆರ್.ಹರೀಶ್‌ಕುಮಾರ್, ಸಹ ಕಾರ್ಯದರ್ಶಿ ಟಿ.ನರಸಿಂಹಮೂರ್ತಿ, ಶಂಕರ್‌ನಾಗ್, ಮುರುಗೇಶ್, ಕೆ.ಸಿ.ವೆಂಕಟರಾಮು ಇತರರಿದ್ದರು.
Published on
ಕೆ.ಆರ್.ಪೇಟೆ: ಪಟ್ಟಣದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಅನಧಿಕೃತ ವ್ಯಕ್ತಿಗಳು ಮತ್ತು ದಲ್ಲಾಳಿಗಳು ಕಾನೂನುಬಾಹಿರವಾಗಿ ದಸ್ತಾವೇಜುಗಳನ್ನು ತಯಾರಿಸಿ ನೋಂದಾಯಿಸುತ್ತಿದ್ದು, ಇದಕ್ಕೆ ನಿರ್ಬಂಧ ಹೇರಬೇಕು ಎಂದು ಆಹಗ್ರಹಿಸಿ ತಾಲೂಕಿನ ಪತ್ರ ಬರಹಗಾರರ ಸಂಘದ ಸದಸ್ಯರು ಶಾಸಕ ಎಚ್.ಟಿ.ಮಂಜು ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಸದಸ್ಯರ ಕೋರಿಕೆ ಮೇರೆಗೆ ಪಟ್ಟಣದ ಉಪ ನೋಂದಣಾಧಿಕಾರಿ ಕಚೇರಿಗೆ ಆಗಮಿಸಿದ ಶಾಸಕ ಮಂಜು ಅವರಿಗೆ ಮನವಿ ಪತ್ರ ಸಲ್ಲಿಸಿದ ಸದಸ್ಯರು, ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ಕಾವೇರಿ-2 ಯೋಜನೆ ಜಾರಿಗೆ ಬಂದಾಗಿನಿಂದ ಪಟ್ಟಣದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿನ ಕೆಲವು ಡಿಟಿಪಿ ಹಾಗೂ ಸೈಬರ್‌ಸೆಂಟರ್ ಆಪರೇಟರ್‌ಗಳು ಅಧಿಕೃತ ಪತ್ರ ಬರಹಗಾರರ ಲೈಸೆನ್ಸ್ ಹೊಂದದಿದ್ದರೂ ಕಾನೂನುಬಾಹಿರವಾಗಿ ಸಾರ್ವಜನಿಕರ ಆಸ್ತಿ ನೋಂದಣಿ ದಸ್ತಾವೇಜು ತಯಾರಿಸಿ ರೈತರು ಮತ್ತು ಸಾರ್ವಜನಿಕರ ಸುಲಿಗೆ ಮಾಡುತ್ತಿದ್ದಾರೆ. ಅನಧಿಕೃತ ದಸ್ತಾವೇಜು ತಯಾರಿಸು ವವರಿಗೆ ದಸ್ತಾವೇಜು ಬರಹದ ಬಗ್ಗೆ ಯಾವುದೇ ಅನುಭವ ಮತ್ತು ಬರವಣಿಗೆ ಕೌಶಲವಿಲ್ಲ. ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ಜನಸಾಮಾನ್ಯರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದು ಸ್ಪಷ್ಟವಾಗಿ ಭಾರತೀಯ ನೋಂದಣಿ ಕಾಯ್ದೆ ಉಲ್ಲಂಘನೆಯಾಗಿದ್ದು, ಪರವಾನಗಿಯಿಲ್ಲದ ಅನಧಿಕೃತ ದಸ್ತಾವೇಜು ಬರಹಗಾರರಿಗೆ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಪುರಸ್ಕಾರ ದೊರಕುತ್ತಿರುವುದರಿಂದ ಅಧಿಕೃತ ಪರವಾನಗಿ ಹೊಂದಿದ ಪತ್ರ ಬರಹಗಾರರ ವೃತ್ತಿಗೆ ಹೊಡೆತ ಬಿದ್ದಿದೆ. ನೋಂದಾಯಿತ ಬರಹಗಾರರ ಬಗ್ಗೆ ಕಾಳಜಿ ವಹಿಸಿ ಅನಧಿಕೃತ ವ್ಯಕ್ತಿಗಳ ಆಟಾಟೋಪವನ್ನು ನಿರ್ಭಂಧಿಸಬೇಕು. ನೋಂದಣಿಗೆ ದಸ್ತಾವೇಜುಗಳನ್ನು ಹಾಜರುಪಡಿಸಿದ ಸಮಯದಲ್ಲಿ ದಸ್ತಾವೇಜು ಲಿಖಿತದ ಅರ್ಹತೆಯನ್ನು ಪರಿಸೀಲಿಸಿ ನೋಂದಣಿಗೆ ಸ್ವೀಕರಿಸಲು ಉಪ ನೋಂದಣಾಧಿಕಾರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದರು.
ಸಂಘದ ಸದಸ್ಯರ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಶಾಸಕ ಎಚ್.ಟಿ.ಮಂಜು, ಈ ಕುರಿತು ಉಪ ನೋಂದಣಾಧಿಕಾರಿಯಿಂದ ಮಾಹಿತಿ ಪಡೆದು ಸೂಕ್ತ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ತಾಲೂಕು ಪತ್ರ ಬರಹಗಾರರ ಸಂಘದ ಅಧ್ಯಕ್ಷ ಪಿ.ಎಸ್.ಶಿವಲಿಂಗೇಗೌಡ, ಉಪಾಧ್ಯಕ್ಷ ಕೆ.ಎಸ್.ನಾಗರಾಜು, ಕಾರ್ಯದರ್ಶಿ ಕೆ.ಆರ್.ಹರೀಶ್‌ಕುಮಾರ್, ಸಹ ಕಾರ್ಯದರ್ಶಿ ಟಿ.ನರಸಿಂಹಮೂರ್ತಿ, ಶಂಕರ್‌ನಾಗ್, ಮುರುಗೇಶ್, ಕೆ.ಸಿ.ವೆಂಕಟರಾಮು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net