ಜಾತ್ರಾ ಮಹೋತ್ಸವ ಪ್ರಚಾರ ರಥಕ್ಕೆ ಚಾಲನೆ

ಮಳವಳ್ಳಿ ಪಟ್ಟಣದ ಶಾಂತಿ ಕಾಲೇಜು ಮುಂಭಾಗದ ಜಾಗದಲ್ಲಿ ಸುತ್ತೂರು ಆದಿಜಗದ್ಗುರು ಶಿವರಾತ್ರಿ ಶಿವಯೋಗಿಗಳ 1066 ಜಯಂತೋತ್ಸವ ಸಮಾರಂಭ ವೇದಿಕೆ ಮಂಟಪ ನಿರ್ಮಾಣಕ್ಕೆ ಭಾನುವಾರ ಸುತ್ತೂರು ಮಠದ ಪೀಠಾಧ್ಯಕ್ಷರಾದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಭೂಮಿಪೂಜೆ ನೆರವೇರಿಸಿದರು. ವಾಟಾಳು ಸೂರ್ಯ ಸಿಂಹಾಸನ ಮಠದ ಸಿದ್ದಲಿಂಗ ಶಿವಾಚಾರ್ಯಸ್ವಾಮೀಜಿ, ದೇಗುಲಮಠದ ಶ್ರೀಚನ್ನಬಸವಸ್ವಾಮೀಜಿ, ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಜಿಲ್ಲಾಧಿಕಾರಿ ಡಾ.ಕುಮಾರ, ಉಪ ವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಡಾ.ಲೋಕೇಶ್ ಇದ್ದರು.
ಮಳವಳ್ಳಿ ಪಟ್ಟಣದ ಶಾಂತಿ ಕಾಲೇಜು ಮುಂಭಾಗದ ಜಾಗದಲ್ಲಿ ಸುತ್ತೂರು ಆದಿಜಗದ್ಗುರು ಶಿವರಾತ್ರಿ ಶಿವಯೋಗಿಗಳ 1066 ಜಯಂತೋತ್ಸವ ಸಮಾರಂಭ ವೇದಿಕೆ ಮಂಟಪ ನಿರ್ಮಾಣಕ್ಕೆ ಭಾನುವಾರ ಸುತ್ತೂರು ಮಠದ ಪೀಠಾಧ್ಯಕ್ಷರಾದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಭೂಮಿಪೂಜೆ ನೆರವೇರಿಸಿದರು. ವಾಟಾಳು ಸೂರ್ಯ ಸಿಂಹಾಸನ ಮಠದ ಸಿದ್ದಲಿಂಗ ಶಿವಾಚಾರ್ಯಸ್ವಾಮೀಜಿ, ದೇಗುಲಮಠದ ಶ್ರೀಚನ್ನಬಸವಸ್ವಾಮೀಜಿ, ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಜಿಲ್ಲಾಧಿಕಾರಿ ಡಾ.ಕುಮಾರ, ಉಪ ವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಡಾ.ಲೋಕೇಶ್ ಇದ್ದರು.
Published on
ಮಳವಳ್ಳಿ: ಪಟ್ಟಣದಲ್ಲಿ ಡಿಸೆಂಬರ್ ಮೂರನೇ ವಾರದಲ್ಲಿ ನಡೆಯಲಿರುವ ಸುತ್ತೂರು ಆದಿಜಗದ್ಗರು ಶ್ರೀಶಿವರಾತ್ರಿಶ್ವರ ಶಿವಯೋಗಿಗಳ 1066 ಜಯಂತೋತ್ಸವ ಆಚರಣೆ ಹಿನ್ನೆಲೆಯಲ್ಲಿ ಭಾನುವಾರ ಪ್ರಚಾರ ರಥಕ್ಕೆ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಧಿಕೃತ ಚಾಲನೆ ನೀಡಿದರು.
ಪಟ್ಟಣದ ಶಾಂತಿ ಕಾಲೇಜು ಮುಂಭಾಗದ 33 ಎಕರೆ ಖಾಲಿ ಜಾಗದಲ್ಲಿ ಶ್ರೀಗಳು ಜಯಂತಿ ಮಂಟಪ ನಿರ್ಮಾಣಕ್ಕೆ ಭೂಮಿಪೂಜೆ ಹಾಗೂ ಪ್ರಚಾರ ರಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹತ್ತನೇ ಶತಮಾನದಲ್ಲಿ ಶಿವರಾತ್ರಿ ಶಿವಯೋಗಿಗಳು ನಾಡಿನ ಜನರ ಶಾಂತಿ, ಸಹಬಾಳ್ವೆಗಾಗಿ ಸಂದೇಶ ನೀಡುವ ಮೂಲಕ ಮನುಕುಲದ ಒಳಿತಿಗಾಗಿ ಹಠಯೋಗಿಯಾಗಿ ಧರ್ಮ ಪ್ರಚಾರ ನಡೆಸಿದ್ದರು. ಅವರ ಸಂದೇಶ ಪರಂಪರೆಯನ್ನು ಶಿವರಾತ್ರಿ ಶಿವಯೋಗಿಗಳ ಸ್ಮರಣೆಯಲ್ಲಿ ಶ್ರೀಮಠವು ಜಯಂತಿ ಆಚರಣೆ ಮೂಲಕ ಸಮಾಜಕ್ಕೆ ಪಸರಿಸುತ್ತಾ ಬರುತ್ತಿದೆ. ಸಮಾಜದಲ್ಲಿ ಸಮಾನತೆ, ಸಹಬಾಳ್ವೆ ಮತ್ತು ನಮ್ಮ ಸಂಸೃತಿಯ ಸೊಗಡನ್ನು ಹಾಗೂ ಜನ ಸಮೂಹದಲ್ಲಿ ಶರಣರ ಕಾಯಕ ನಿಷ್ಠೆಯನ್ನು ಅನುಕರಿಸಲು ಜಯಂತಿ ಆಚರಣೆ ಪೂರಕವಾಗಿದ್ದು, ತಾಲೂಕಿನ ಸರ್ವ ಸಮಾಜದ ಒಕ್ಕೊರಳ ಆಶಯದಂತೆ ಪ್ರಸ್ತುತ ವರ್ಷ ಮಳವಳ್ಳಿ ಪಟ್ಟಣದಲ್ಲಿ ಜಯಂತಿ ಮಹೋತ್ಸವ ಆಚರಣೆಗೆ ಚಾಲನೆ ನೀಡಲಾಗಿದೆ. ಈ ಧಾರ್ಮಿಕ ಸಮಾರಂಭವನ್ನು ಯಶಸ್ವಿಗೊಳಿಸುವ ಮೂಲಕ ಧಾರ್ಮಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಎಲ್ಲರೂ ಶ್ರದ್ಧೆ ಮತ್ತು ಶಿಸ್ತಿನಿಂದ ನಡೆಸುವಂತೆ ಆಶೀರ್ವಚನ ನೀಡಿದರು.
ಶಾಸಕ ಪಿ.ಎಂ.ನರೇಂದ್ರಸ್ವಾಮಿ, ತಾಲೂಕು ಕೇಂದ್ರದಲ್ಲಿ ಭಕ್ತಿ ಪರಂಪರೆಯನ್ನು ಮೆರೆಯಲು ದೊರೆತಿರುವ ಸದಾವಾಕಾಶ ನಮ್ಮ ಪುಣ್ಯವಾಗಿದ್ದು, ಸುತ್ತೂರು ಶ್ರೀಗಳ ಸಲಹೆಯಂತೆ ಮಳವಳ್ಳಿ ಪಟ್ಟಣದಲ್ಲಿ ಶಿವರಾತ್ರಿ ಶಿವಯೋಗಿಗಳ ಜಯಂತಿ ಆಚರಣೆಯನ್ನು ಯಶಸ್ವಿಯಾಗಿ ನಡೆಸಲು ಶ್ರೀಮಠದ ಸದ್ಭಕ್ತರ ಜತೆಗೂಡಿ ಶ್ರಮಿಸಲಾಗುವುದು ಎಂದರು.
ವಾಟಾಳು ಸೂರ್ಯ ಸಿಂಹಾಸನ ಮಠದ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ, ಕನಕಪುರ ದೇಗುಲ ಮಠದ ಶ್ರೀಚನ್ನಬಸವ ಸ್ವಾಮೀಜಿ, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಜಿಲ್ಲಾಧಿಕಾರಿ ಡಾ.ಕುಮಾರ, ಉಪ ವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಡಾ.ಲೋಕೇಶ್, ಪುರಸಭೆ ಉಪಾಧ್ಯಕ್ಷ ಬಸವರಾಜು, ಮುಖ್ಯಾಧಿಕಾರಿ ನಾಗರತ್ನಾ ಹಾಗೂ ಜಯತೋತ್ಸವ ಸಮಿತಿ ಸದಸ್ಯರು ಮತ್ತು ನೂರಾರು ವಿವಿಧ ಸಮುದಾಯಗಳ ಮುಖಂಡರು ಹಾಜರಿದ್ದರು.
ಶೀಘ್ರದಲ್ಲೇ ಅಧಿಕೃತ ದಿನಾಂಕ ಪ್ರಕಟಣೆ: ಡಿ.18ರಿಂದ 23ರ ವರೆಗೆ ಜಯಂತೋತ್ಸವಕ್ಕೆ ದಿನಾಂಕ ನಿಗದಿಯಾಗಿತ್ತು. ಆದರೇ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಡಿ.15ಕ್ಕೆ ಎರಡು ದಿನ ಮುಂಚಿತವಾಗಿ ಬೇರೊಂದು ಕಾರ್ಯಕ್ರಮವೊಂದಕ್ಕೆ ರಾಜ್ಯಕ್ಕೆ ಬರುವುದರಿಂದ ಅಂದಿನ ಸಮಯ ಹೊಂದಾಣಿಕೆ ಮಾಡಿಕೊಳ್ಳಲು ರಾಷ್ಟ್ರಪತಿಗಳ ಭವನದಿಂದ ಮಾಹಿತಿ ಬಂದಿದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಜಯಂತಿ ವೇಳಾಪಟ್ಟಿ ದಿನಾಂಕಗಳು ಬದಾಲಾಗುವ ನಿರೀಕ್ಷೆ ಇರುವುದರಿಂದ ಜಯಂತಿ ಆಚರಣೆ ದಿನಾಂಕವನ್ನು ಶೀಘ್ರದಲ್ಲೇ ಅಧಿಕೃತಗೊಳಿಸಲಾಗುವುದು ಎಂದು ಜಯಂತಿ ಆಚರಣೆ ಸಮಿತಿ ತಿಳಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net