ಪಕ್ಕದ ಮನೆಯ ಬಾಲಕಿಯನ್ನೇ ರೇಪ್​ ಮಾಡಿದ 61 ವರ್ಷದ ವೃದ್ಧ! ಬಾಲಕಿ ಹೇಳಿದರೂ ತಲೆಯೇ ಕೆಡಿಸಿಕೊಳ್ಳದ ಪೋಷಕರು

rape
Published on

ಮಂಡ್ಯ: ತಾತ ಎಂದು ಪ್ರೀತಿಯಿಂದ ಕರೆಯುತ್ತಿದ್ದ ನೆರೆ ಮನೆಯೆ ವೃದ್ಧನೇ 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಬಾಲಕಿ ಗರ್ಭಿಣಿಯಾದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಮಂಡ್ಯದ ಗಾಂಧಿನಗರ ನಿವಾಸಿ ವೆಂಕಟೇಶ್ ಎಂಬಾತ ಈ ಕೃತ್ಯವೆಸಗಿದ್ದಾನೆ. ಪಕ್ಕದ ಮನೆಯ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾನೆ. ಶಾಲೆಗೆ ರಜೆ ಇರುವುದರಿಂದ ಬಾಲಕಿ ಮನೆಯಲ್ಲೇ ಇರುತ್ತಿದ್ದಳು. ಆಕೆಯ ತಂದೆ ತಾಯಿ ಕೆಲಸಕ್ಕೆ ಹೋದ ಸಮಯದಲ್ಲಿ ಮನೆಗೆ ತೆರಳುತ್ತಿದ್ದ ಆತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಒಂದು ವೇಳೆ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಪಕ್ಕದ ಮನೆ ತಾತ ಕೆಟ್ಟದೃಷ್ಟಿಯಿಂದ ನೋಡುತ್ತಾರೆ, ಮೈಕೈ ಮುಟ್ಟುತ್ತಾರೆ ಎಂದು ಬಾಲಕಿ ತಂದೆ ತಾಯಿಯ ಬಳಿ ಹೇಳಿಕೊಂಡಿದ್ದಳು. ಆದರೆ ಅದರ ಬಗ್ಗೆ ಅಷ್ಟೇನು ಗಮನ ಕೊಡದ ಪೋಷಕರು, ಆತ ಹಿರಿಯರು, ಬಾಲಕಿಯೇ ತಪ್ಪಾಗಿ ಅರ್ಥೈಸಿಕೊಂಡಿದ್ದಾಳೆಂದು ಸುಮ್ಮನಾಗಿದ್ದಾರೆ. ಈ ಮಧ್ಯೆ ಬಾಲಕಿ ಗರ್ಭಿಣಿಯಾಗಿದ್ದು, ಘಟನೆಯ ಸೂಕ್ಷ್ಮತೆ ಪೋಷಕರ ಅರಿವಿಗೆ ಬಂದಿದೆ. ವೆಂಕಟೇಶ್​ ವಿರುದ್ಧ ಮಂಡ್ಯ ಪಶ್ಚಿಮ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net