More

    ಆರು ತಿಂಗಳ ಸಂಬಳದಷ್ಟು ದಂಡ ಸಂಗ್ರಹಿಸಿದ ಮಾರ್ಷಲ್​ಗಳು! ಬೆಂಗಳೂರೊಂದರಲ್ಲೇ ಸಂಗ್ರಹವಾದ ಮೊತ್ತ ಎಷ್ಟು ಗೊತ್ತಾ?

    ಬೆಂಗಳೂರು: ಕರೊನಾ ಸೋಂಕು ಆರಂಭವಾದಾಗಿನಿಂದ ಮಾಸ್ಕ್​ ಬಳಕೆ ಕಡ್ಡಾಯ ಮಾಡಲಾಗಿದೆ. ಮಾಸ್ಕ್​ ಹಾಕದವರ ಬಳಿ ದಂಡ ಸಂಗ್ರಗಹಿಸಲೆಂದೇ ಮಾರ್ಷಲ್​ಗಳು ರಸ್ತೆಗಳಿದಿದ್ದು ಕೋಟಿ ಕೋಟಿ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ಈವರೆಗೆ ಮಾರ್ಷಲ್​ಗಳು ಎಷ್ಟು ದಂಡ ಸಂಗ್ರಹಿಸಿದ್ದಾರೆ ಗೊತ್ತೇ?

    ಇದನ್ನೂ ಓದಿ: ಅಧಿವೇಶನಕ್ಕೆ ಮುನ್ನ ಸಚಿವ ಸಂಪುಟ ವಿಸ್ತರಣೆ ಆಗತ್ತಾ? ಏನಂತಾರೆ ಸಿಎಂ?

    ಬೆಂಗಳೂರು ಒಂದೇ ನಗರದಲ್ಲಿ ಸುಮಾರು ಐದೂವರೆ ಕೋಟಿ ರೂಪಾಯಿಯಷ್ಟನ್ನು ದಂಡದ ರೂಪದಲ್ಲಿ ಸಂಗ್ರಹಿಸಲಾಗಿದೆ. ಮೊದಲಿಗೆ 1000 ರೂಪಾಯಿ ದಂಡ ವಿಧಿಸಲಾಗುತ್ತಿತ್ತು. ದಂಡದ ಮೊತ್ತದ ಬಗ್ಗೆ ಭಾರಿ ಚರ್ಚೆಗಳಾಗಿದ್ದು, ವಿರೋಧ ವ್ಯಕ್ತವಾಗಿತ್ತು. ಬಳಿಕ ರಾಜ್ಯ ಸರ್ಕಾರ ದಂಡದ ಮೊತ್ತವನ್ನು 250 ರೂಪಾಯಿಗೆ ಇಳಿಸಿತ್ತು. ಈವರೆಗೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 5.5 ಕೋಟಿ ರೂಪಾಯಿಗೂ ಹೆಚ್ಚು ದಂಡ ಸಂಗ್ರಹಿಸಲಾಗಿದೆ. ತಮ್ಮ ಆರು ತಿಂಗಳ ಸಂಬಳವನ್ನು ದಂಡದ ರೂಪದಲ್ಲಿ ವಸೂಲಿ ಮಾಡಿರುವುದಾಗಿ ತಿಳಿಸಲಾಗಿದೆ.

    ಇದನ್ನೂ ಓದಿ: ಬಿಬಿಎಂಪಿ ಚುನಾವಣೆ ಯಾವಾಗ? ಮಹಾನಗರ ಪಾಲಿಕೆ ಚುನಾವಣೆ ಕುತೂಹಲಕ್ಕಿಂದು ತೆರೆ

    ದಂಡ ವಿದಿಸುವ ವೇಳೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತದೆ. ಕೆಲವೊಮ್ಮೆ ಹಲ್ಲೆಗಳು ಆಗಿವೆ. ಈ ವೇಳೆ ಪೊಲೀಸರಿದ್ದರೆ ರಕ್ಷಣೆ ದೊರೆಯುತ್ತದೆ ಎಂದು ಮಾರ್ಷಲ್​ಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts