More

  ಉಚಿತ ನೀರು ಕೊಡದೆ ವಾಟರ್​ ಬಾಟಲ್​ ಕೊಟ್ಟ ರೆಸ್ಟೋರೆಂಟ್​ಗೆ ಬಿಗ್​ ಶಾಕ್​! ಬಿತ್ತು ಭಾರಿ ದಂಡ

  ಹೈದರಾಬಾದ್​: ಕುಡಿಯುವ ನೀರಿನ ವ್ಯಾಪಾರ ಮಾಡಿ ಲಕ್ಷಗಟ್ಟಲೆ ಸಂಪಾದನೆ ಮಾಡುತ್ತಿರುವುದು ನಿಮಗೆ ಗೊತ್ತಿದೆ. ಮಿನರಲ್ ವಾಟರ್ ಹಾಗೂ ವಾಟರ್ ಬಾಟಲ್​ಗಳಿಗೆ ಜನರು ಒಗ್ಗಿಕೊಂಡಿರುವ ಹಿನ್ನೆಲೆಯಲ್ಲಿ ಇದನ್ನೇ ಕೆಲವರು ಬಂಡವಾಳ ಮಾಡಿಕೊಂಡಿದ್ದಾರೆ. ಇದುವರೆಗೂ ಹೋಟೆಲ್​ ಹಾಗೂ ರೆಸ್ಟೋರೆಂಟ್​ಗಳಲ್ಲಿ ಉತ್ತಮ ನೀರನ್ನು ಉಚಿತವಾಗಿ ನೀಡಲಾಗುತ್ತಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ರೆಸ್ಟೋರೆಂಟ್​​ಗಳಲ್ಲಿ ತಿನ್ನಲು ಹೋಗುವ ಗ್ರಾಹಕರಿಗೆ ಉಚಿತ ನೀರು ಕೊಡದೆ ಹೊಸ ಹಗರಣಕ್ಕೆ ನಾಂದಿಯಾಡಿದ್ದಾರೆ.

  ಯಾವುದು ಆ ಹಗರಣವೆಂದರೆ, ಮಗ್​ಗಳಲ್ಲಿ ಉಚಿತವಾಗಿ ನೀರು ಕೊಡುವ ಬದಲು ಸೀಲ್ ಮಾಡಿದ ನೀರಿನ ಬಾಟಲಿಗಳನ್ನು ಕೊಟ್ಟು ಅದಕ್ಕೂ ಬಿಲ್ ನೀಡುತ್ತಿದ್ದಾರೆ. ಕೆಲವೊಮ್ಮೆ ಇದೇ ವಿಚಾರಕ್ಕೆ ಜಗಳ ಆಗಿರುವುದು ಉಂಟು. ಇದೇ ರೀತಿ ಗ್ರಾಹಕರಿಗೆ ಉಚಿತ ನೀರು ಕೊಡದ ರೆಸ್ಟೋರೆಂಟ್​ಗೆ ಜಿಲ್ಲಾ ಗ್ರಾಹಕ ಆಯೋಗ ಇದೀಗ ಶಾಕ್ ನೀಡಿದೆ. ಈ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

  ಹಬ್ಬಗಳು ಅಥವಾ ವಾರಾಂತ್ಯಗಳಲ್ಲಿ ಜನರು ತಮ್ಮ ಸ್ನೇಹಿತರು ಅಥವಾ ಕುಟುಂಬದೊಂದಿಗೆ ತಿನ್ನಲು ರೆಸ್ಟೋರೆಂಟ್‌ಗಳಿಗೆ ಹೋಗುತ್ತಾರೆ. ಈ ಸಂದರ್ಭದಲ್ಲಿ ನೂರಾರು ಮತ್ತು ಸಾವಿರಾರು ಖರ್ಚು ಮಾಡಿ, ಆಹಾರವನ್ನು ಆರ್ಡರ್ ಮಾಡುತ್ತಾರೆ. ಆದರೆ, ರೆಸ್ಟೋರೆಂಟ್ ಆಡಳಿತವು ಗ್ರಾಹಕರಿಗೆ ಉಚಿತವಾಗಿ ಕುಡಿಯುವ ನೀರು ಸಹ ನೀಡುತ್ತಿಲ್ಲ.

  ಇನ್ನು ತೆಲಂಗಾಣ ಸರ್ಕಾರದ ಮುನ್ಸಿಪಲ್ ಅಡ್ಮಿನಿಸ್ಟ್ರೇಷನ್ ಮತ್ತು ನಗರಾಭಿವೃದ್ಧಿ ಇಲಾಖೆಯು 2023ರಿಂದ ಎಲ್ಲ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರಿಗೆ ಉಚಿತ ನೀರನ್ನು ಒದಗಿಸಲು ನಿಯಮಾವಳಿಗಳನ್ನು ಹೊರಡಿಸಿದೆ. ಆದರೆ ಕೆಲವು ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳು ಈ ನಿಯಮಗಳನ್ನು ಗಾಳಿಗೆ ತೂರಿವೆ ಮತ್ತು ನೀರಿಗೆ ಬಿಲ್ ನೀಡುತ್ತಿವೆ. ಹೈದರಾಬಾದ್‌ನ ರೆಸ್ಟೋರೆಂಟ್‌ ಒಂದು ಪ್ರತಿ ಲೀಟರ್ ನೀರಿಗೆ 50 ರೂ. ಶುಲ್ಕ ವಿಧಿಸಿದ್ದಕ್ಕೆ, ಜಿಲ್ಲಾ ಗ್ರಾಹಕರ ಆಯೋಗ ರೆಸ್ಟೋರೆಂಟ್​ಗೆ ರೂ.5 ಸಾವಿರ ದಂಡ ವಿಧಿಸಿದೆ.

  ಸಿಕಂದರಾಬಾದ್‌ನ ವ್ಯಕ್ತಿಯೊಬ್ಬರು ಊಟ ಮಾಡಲು ರೆಸ್ಟೋರೆಂಟ್‌ಗೆ ತೆರಳಿದ್ದರು. ಊಟವಾದ ಬಳಿಕ ಹೋಟೆಲ್ ಸಿಬ್ಬಂದಿಗೆ ಪ್ಲಾಸ್ಟಿಕ್ ವಾಟರ್ ಬಾಟಲ್ ಬದಲು ಮಗ್​ನಲ್ಲಿ ನೀರು ನೀಡುವಂತೆ ಕೇಳಿದರು. ಆದರೆ, ರೆಸ್ಟೋರೆಂಟ್ ಸಿಬ್ಬಂದಿ 1 ಲೀಟರ್​ ವಾಟರ್ ಬಾಟಲ್ ನೀಡಿ 50 ರೂ. ಬಿಲ್​ ನೀಡಿದ್ದಾನೆ. ಇದರಿಂದ ರೆಸ್ಟೋರೆಂಟ್ ಆಡಳಿತ ಮಂಡಳಿ ವಿರುದ್ಧ ಅಸಮಾಧಾನಗೊಂಡ ಗ್ರಾಹಕ, ಈ ಸಂಬಂಧ ಗ್ರಾಹಕ ಆಯೋಗಕ್ಕೆ ದೂರು ನೀಡಿದ್ದರು.

  ಈ ಕುರಿತು ತನಿಖೆ ನಡೆಸಿದ ಗ್ರಾಹಕ ಆಯೋಗ, ರೆಸ್ಟೋರೆಂಟ್​ಗೆ 5,000 ರೂ. ದಂಡ ವಿಧಿಸಿದೆ. ಅಲ್ಲದೆ, ವ್ಯಾಜ್ಯ ಶುಲ್ಕವಾಗಿ ಗ್ರಾಹಕನಿಗೆ 1,000 ರೂಪಾಯಿ ಪಾವತಿಸುವಂತೆ ಆದೇಶಿಸಿದೆ. ಅಲ್ಲದೆ, ನೀರಿನ ಬಾಟಲಿಗೆ ತೆಗೆದುಕೊಂಡಿದ್ದ 50 ರೂ.ಗಳನ್ನು ಹಿಂದಿರುಗಿಸುವಂತೆ ಜಿಲ್ಲಾ ಗ್ರಾಹಕ ಆಯೋಗವು ರೆಸ್ಟೋರೆಂಟ್‌ಗೆ ಆದೇಶಿಸಿದೆ.

  ಅಂದಹಾಗೆ ನೀವು ಸಹ ಇದೇ ರೀತಿಯ ಘಟನೆಯನ್ನು ಎದುರಿಸಿದ್ದೀರಾ? ಇದು ನಿಮಗೆ ಎಂದಾದರೂ ಸಂಭವಿಸಿದರೆ, ನೀವು ಗ್ರಾಹಕ ಆಯೋಗವನ್ನು ಸಂಪರ್ಕಿಸಬಹುದು ಮತ್ತು ಪರಿಹಾರವನ್ನು ಪಡೆಯಬಹುದು. ಉಚಿತ ನೀರು ನೀಡದ ರೆಸ್ಟೋರೆಂಟ್‌ಗೆ 5 ಸಾವಿರ ರೂ. ದಂಡ ವಿಧಿಸುವ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ರೂಪದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್​)

  ಮಹಾಲಕ್ಷ್ಮೀ ದಾಂಪತ್ಯದಲ್ಲಿ ಬಿರುಗಾಳಿ! ದಡೂತಿ ಗಂಡನಿಗೆ ಖಡಕ್​ ಎಚ್ಚರಿಕೆ ಕೊಟ್ಟ ನಟಿ

  ನಾಗಚೈತನ್ಯ ಹೆತ್ತ ತಾಯಿಯಿಂದ ದೂರ ಉಳಿದಿರುವುದೇಕೆ? ನೆಚ್ಚಿನ ನಟನಿಗೆ ಹೀಗಾಗಬಾರದಿತ್ತು ಅಂದ್ರು ಫ್ಯಾನ್ಸ್​!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts