ಏಕೆ ಹೆಂಡತಿಯನ್ನು ಕೊಂದ, ಆತನಿಗೆ ಸಿಕ್ಕಿದ ಶಿಕ್ಷೆ ಏನು ಗೊತ್ತಾ?

Accused Arrest
Published on

ಚಿಕ್ಕಬಳ್ಳಾಪುರ: ಪ್ರತಿನಿತ್ಯ ಬೈಗುಳವನ್ನು ಸಹಿಸಲಾಗದೇ ಹೆಂಡತಿಯನ್ನು ಭೀಕರವಾಗಿ ಕೊಂದ ಪತಿರಾಯನಿಗೆ ಚಿಕ್ಕಬಳ್ಳಾಪುರ ಜಿಲ್ಲಾ ನ್ಯಾಯಾಲಯವು ಜೀವಾವಧಿ ಶಿಕ್ಷೆಯ ಜತೆಗೆ 25 ಸಾವಿರ ರೂ ದಂಡವನ್ನು ವಿಧಿಸಿದೆ.

ಗೌರಿಬಿದನೂರು ತಾಲೂಕಿನ ಗೊಟ್ಲಕುಂಟೆಯ ಅಶ್ವತ್ಥಪ್ಪ (48 ವರ್ಷ) ಅಪರಾಧಿ. ಈತನಿಂದ ಭೀಕರವಾಗಿ ಕೊಲೆಯಾದ ಮಹಿಳೆ ರಾಧಮ್ಮ. ಮನೆಯಲ್ಲಿ ಪ್ರತಿನಿತ್ಯ ದಂಪತಿಯ ನಡುವೆ ಗಲಾಟೆ ನಡೆಯುತ್ತಿತ್ತು. ಪತಿ ಪರಸ್ತ್ರೀಯೊಂದಿಗೆ ಅಕ್ರಮ ಸಂಬಂಧವನ್ನಿಟ್ಟುಕೊಂಡು ನನ್ನ ಜತೆಗೆ ಚೆನ್ನಾಗಿರುತ್ತಿಲ್ಲ ಎಂಬ ಭಾವನೆಯಲ್ಲಿ ರಾಧಮ್ಮ ಅಶ್ವತಪ್ಪನನ್ನು ನಿಂದಿಸುತ್ತಿದ್ದಳು. ಇದೇ ವಿಚಾರವಾಗಿ ಗಲಾಟೆ ಅತಿರೇಕಕ್ಕೆ ಹೋದ ಹಿನ್ನೆಲೆಯಲ್ಲಿ ಬೇಸತ್ತ ಗಂಡ, ಹೆಂಡತಿ ಮಲಗಿದ್ದ ವೇಳೆ ಬೆಳ್ಳಂಬೆಳಗ್ಗೆಯೇ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಕೈ, ಭುಜಕ್ಕಾದ ಗಾಯದ ನೋವಿನಿಂದ ಪತ್ನಿ ಪರಿಪರಿಯಾಗಿ ಬೇಡಿಕೊಂಡು ಚೀರಾಡಿದರೂ ಮನಸ್ಸು ಕರಗಿಲ್ಲ. ಮತ್ತಷ್ಟು ಕೋಪಗೊಂಡು ಕತ್ತು ಕುಯ್ದು ಕೊಲೆ ಮಾಡಿದ್ದಾನೆ. ಬಳಿಕ ರಕ್ತಸಿಕ್ತ ಮಚ್ಚು ತೆಗೆದುಕೊಂಡು ಹೋಗಿ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.

ಪ್ರಕರಣದ ವಿಚಾರಣೆ ನಡೆಸಿದ ಮೂರನೇ ಡಿವಿಜನ್ ನ ಜಿಲ್ಲಾ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ಎಸ್.ನಟರಾಜ್ ಅಶ್ವತ್ಥಪ್ಪನಿಗೆ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರೂ ದಂಡ ವಿಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net