ಚಿನ್ನದಂಗಡಿಯ ಹುಡುಗಿಯ ಹೃದಯಕ್ಕೆ ಕನ್ನ ಹಾಕುವ ಯತ್ನ; ಕೊನೆಗೂ ಸೋತು ಆಕೆಗೆ ಚೂರಿ ಇರಿದವ ಹೆಣವಾಗಿ ಸಿಕ್ಕ...

Raghavendra
Published on

ಉಡುಪಿ: ಚಿನ್ನದಂಗಡಿಯ ಹುಡುಗಿಯ ಹೃದಯಕ್ಕೆ ಕನ್ನ ಹಾಕಲು ಯತ್ನಿಸಿದ ಯುವಕನೊಬ್ಬ ಕೊನೆಗೆ ಅದರಲ್ಲಿ ವಿಫಲನಾಗಿದ್ದಲ್ಲದೆ, ಆಕೆಗೆ ಚೂರಿಯಿಂದ ಇರಿದು ಪರಾರಿಯಾಗಿದ್ದ. ಬಳಿಕ ಆತ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಶಿರಿಯಾರದಲ್ಲಿ ಈ ಘಟನೆ ನಡೆದಿದೆ. ರಿಕ್ಷಾ ಚಾಲಕ ರಾಘವೇಂದ್ರ ಕುಲಾಲ್​ ಶವವಾಗಿ ಪತ್ತೆಯಾದ ಯುವಕ. ಈತ ಶಿರಿಯಾರದ ಆಭರಣ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ತನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ.

ಇಂದು ಆಕೆ ಊಟಕ್ಕೆಂದು ಮಳಿಗೆಯಿಂದ ಹೊರಬಂದಿದ್ದಾಗ ಹಿಂಬಾಲಿಸಿದ ಈತ ಶಿರಿಯಾರದ ರಾಮಮಂದಿರ ಬಳಿ ಯುವತಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದ. ಅದೃಷ್ಟವಶಾತ್ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ನಂತರ ರಾಘವೇಂದ್ರನ ಶವ ಸಮೀಪದ ಹಾಡಿಯಲ್ಲಿ ಕಂಡುಬಂದಿದೆ. ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net