ಫ್ಲೈಟಲ್ಲಿ ಬಂದು ಕಳವು ಮಾಡಿ ಫ್ಲೈಟಲ್ಲೇ ಮರಳಿದ; 5 ವರ್ಷಗಳ ಹಿಂದೆ ಕದ್ದು ಸಿಕ್ಕಿಬಿದ್ದಿದ್ದ ಆ ದ್ವೇಷವನ್ನು ಮತ್ತೆ ಕದ್ದೇ ತೀರಿಸಿಕೊಂಡ!

flight
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ಐದು ವರ್ಷಗಳ ಹಿಂದೆ ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡಿದ್ದ ಕೆಲಸಗಾರ ಮತ್ತೆ ಕಳವು ಮಾಡಿ ಮಾಲೀಕನ ವಿರುದ್ಧ ಸೇಡು ತೀರಿಸಿಕೊಂಡಿದ್ದಾನೆ. ವಿಶೇಷವೆಂದರೆ, ಈ ಕಳವಿಗಾಗಿ ಆತ ವಿಮಾನದಲ್ಲಿ ಬಂದು ವಿಮಾನದಲ್ಲೇ ವಾಪಸ್ ಹೋಗಿದ್ದಾನೆ.

ಬೆಂಗಳೂರಿನ ಬಸವನಗುಡಿ ಠಾಣಾ ವ್ಯಾಪ್ತಿಯ ರಾಮ್​ದೇವ್​ ಬಟ್ಟೆ ಅಂಗಡಿಯಲ್ಲಿ ಇಂಥದ್ದೊಂದು ಕಳ್ಳತನ ನಡೆದಿದೆ. ಕಳವು ಮಾಡಿದ್ದ ಈ ವ್ಯಕ್ತಿ ರಾಜಸ್ಥಾನ ಮೂಲದವನಾಗಿದ್ದು, ಈ ಕಳವಿಗಾಗಿ ಆತ ವಿಮಾನದಲ್ಲಿ ಬೆಂಗಳೂರಿಗೆ ಬಂದು ವಿಮಾನದಲ್ಲಿ ಮರಳಿದ್ದಾನೆ.

ಐದು ವರ್ಷಗಳ ಹಿಂದೆ ಈತ ಇದೇ ರಾಮ್​ದೇವ್​ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕಿದ್ದ. ಆ ಸಮಯದಲ್ಲಿ ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡಿದ್ದ. ನಂತರ ಈತ ಕೆಲಸ ಬಿಟ್ಟು ಹೋಗಿದ್ದ. ಆದರೆ ಕದ್ದು ಸಿಕ್ಕಿಬಿದ್ದಿದ್ದ ಈತ ಅಂಗಡಿ ಮಾಲೀಕನ ವಿರುದ್ಧ ದ್ವೇಷ ಬೆಳೆಸಿಕೊಂಡಿದ್ದ. ಕೆಲಸ ಬಿಟ್ಟ ಮೇಲೂ ಆಗಾಗ ಅಂಗಡಿ ಬಳಿಗೆ ಬಂದು ಗಮನಿಸಿ ಹೋಗಿದ್ದ ಎನ್ನಲಾಗಿದೆ.

ಕಳೆದ ವಾರ ಅಂಗಡಿಯಲ್ಲಿ ಯಾರೂ ಇಲ್ಲದ್ದನ್ನು ನೋಡಿ ಈತ ಈ ಕೃತ್ಯ ಎಸಗಿದ್ದಾನೆ. ಅಂಗಡಿಗೆ ನುಗ್ಗಿ ಡ್ರಾಯರ್​ನಲ್ಲಿದ್ದ 2 ಲಕ್ಷ ರೂಪಾಯಿ ಕದ್ದುಕೊಂಡು ಹೋಗಿದ್ದಾನೆ. ಇದಕ್ಕಾಗಿ ಈತ ರಾಜಸ್ಥಾನದಿಂದ ವಿಮಾನದಲ್ಲಿ ಬಂದಿದ್ದ ಎನ್ನಲಾಗಿದೆ. ಈ ಬಗ್ಗೆ ಅಂಗಡಿ ಮಾಲೀಕ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net