ಪತ್ನಿ, ಮಗನನ್ನು ಕೊಂದು ರೈಲಿಗೆ ತಲೆಕೊಟ್ಟು Suicide ಮಾಡಿಕೊಂಡ ಪತಿ; ಸೊಸೆ-ಮೊಮ್ಮಗನ ಮೃತದೇಹ ಮನೆಯಲ್ಲಿದ್ದರೂ ಅರಿಯದ ಅತ್ತೆ-ಮಾವ

Mangalore Suicide
Published on

ದಕ್ಷಿಣ ಕನ್ನಡ: ಪತ್ನಿ ಮತ್ತು ಮಗನನ್ನು ಚಾಕುವಿನಿಂದ ಇರಿದು ಕೊಂದು ವ್ಯಕ್ತಿಯೋರ್ವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಮುಲ್ಕಿ ತಾಲ್ಲೂಕಿನ ಪಕ್ಷಿಕೆರೆಯಲ್ಲಿ ನಡೆದಿದೆ.

ಮೃತರನ್ನು ಕಾರ್ತಿಕ್​ ಭಟ್​ (32), ಅವರ ಪತ್ನಿ ಪ್ರಿಯಾಂಕಾ(28), ಪುತ್ರ ಹೃದಯ್(4) ಎಂದು ಗುರುತಿಸಲಾಗಿದೆ. ಕೌಟುಂಬಿಕ ಸಮಸ್ಯೆಯಿಂದ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Mangalore Suicide

ಸಹಕಾರಿ ಬ್ಯಾಂಕ್​ ಒಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ತಿಕ್​ ನವೆಂಬರ್​ 08ರಂದು ಪತ್ನಿ ಮಗನನ್ನು ಕೊಂದು ಆ ಬಳಿಕ ಬೆಳ್ಳಾಯುರುವಿನಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ರೈಲ್ವೆ ಹಳಿ ಬಳಿ ಕಾರ್ತಿಕ್​ ಮೃತದೇಹ ಪತ್ತೆಯಾದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಕೌಟುಂಬಿಕ ಕಲಹದ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಮೃತ ಕಾರ್ತಿಕ್ ತಂದೆ ಜನಾರ್ದನ ಭಟ್​ ಪಕ್ಷಿಕೆರೆ ಜಂಕ್ಷನ್​ಲ್ಲಿ ಹೋಟೆಲ್ ಒಂದನ್ನು ನಡೆಸುತ್ತಿದ್ದರು. ಸೊಸೆಗೆ ಅತ್ತೆ, ಮಾವನೊಂದಿಗೆ ಮನಸ್ತಾಪ ಇದ್ದ ಕಾರಣ ಒಂದೇ ಮನೆಯಲ್ಲಿದ್ದರು ಒಬ್ಬರನ್ನೊಬ್ಬರು ಮಾತನಾಡಿಸುತ್ತಿರಲಿಲ್ಲ. ಘಟನೆ ನಡೆದು ಬಹಳ ಹೊತ್ತು ಕಳೆದರು ಸೊಸೆ ಹಾಗೂ ಮೊಮ್ಮಗ ಕೊಲೆಯಾಗಿರುವ ವಿಚಾರ ಕಾರ್ತಿಕ್​ ಪೋಷಕರ ಗಮನಕ್ಕೆ ಬಂದಿರಲಿಲ್ಲ. ಪೊಲೀಸರು ಬಂದು ರೂಮಿನ ಬಾಗಿಲು ತೆರೆದಾಗ ಇಡೀ ಘಟನೆ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಮಂಗಳೂರು ಎಸಿಪಿ ಶ್ರೀಕಾಂತ್, ಮುಲ್ಕಿ ಪೊಲೀಸ್ ಇನ್ಸ್‌ಪೆಕ್ಟರ್ ವಿದ್ಯಾಧರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net