ಅಣ್ಣನ ಅಗಲಿಕೆ ಸಹಿಸಲಾಗದೆ ನೇಣಿಗೆ ಕೊರಳೊಡ್ಡಿದ ತಮ್ಮ; ಶೆಡ್​ನಲ್ಲೇ ಆತ್ಮಹತ್ಯೆ..

death
ಸಾಂದರ್ಭಿಕ ಚಿತ್ರ
Published on

ನೆಲಮಂಗಲ: ಮೊನ್ನೆಮೊನ್ನೆಯಷ್ಟೇ ಶಾಸಕರೊಬ್ಬರ ಮೊಮ್ಮಗಳು ತಮ್ಮನ ಸಾವನ್ನು ಕಂಡು, ಅದೇ ಸ್ಥಳದಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಇಂದು ವ್ಯಕ್ತಿಯೊಬ್ಬರು ಅಣ್ಣನ ಅಗಲಿಕೆಯಿಂದ ನೊಂದು ನೇಣಿಗೆ ಕೊರಳೊಡ್ಡಿದ್ದಾರೆ.

ನೆಲಮಂಗಲ ನಗರದ ತಿಮ್ಮಶೆಟ್ಟಪ್ಪ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ನಾರಾಯಣ (52) ಎಂಬವರು ಸಾವಿಗೀಡಾಗಿದ್ದಾರೆ. ಇವರು ಇತ್ತೀಚೆಗೆ ಅಗಲಿರುವ ಅಣ್ಣನ ಅಗಲಿಕೆಯ ನೋವನ್ನು ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಇವರು ತಮಗೆ ಸೇರಿರುವ ಶೆಡ್​ನಲ್ಲಿನ ಆ್ಯಂಗಲ್​ಗೆ ಹಗ್ಗ ಬಿಗಿದು ನೇಣು ಹಾಕಿಕೊಂಡಿದ್ದಾರೆ. ಬೆಳಗಿನ ಜಾವ 3-4 ಗಂಟೆ ಸುಮಾರಿಗೆ ಇವರು ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳಕ್ಕೆ ನೆಲಮಂಗಲ ಠಾಣೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net