VIDEO| ಕರೊನಾ ಸೋಂಕಿತರ ಮನೋಲ್ಲಾಸಕ್ಕೆ ಹಾಡುತ್ತಾ ಮಸ್ತ್​ ಡಾನ್ಸ್​ ಮಾಡಿದ ಜೆಡಿಎಸ್​ ಶಾಸಕ!

annadani dance
Published on

ಮಂಡ್ಯ: ಕೋವಿಡ್ ಸೋಂಕಿತರ ಮನೋಲ್ಲಾಸಕ್ಕಾಗಿ ಕೋವಿಡ್ ಕೇರ್ ಕೇಂದ್ರದಲ್ಲಿ ಖುದ್ದು ಶಾಸಕರೇ ಹಾಡುತ್ತಾ, ನೃತ್ಯ ಮಾಡಿ ಸೋಂಕಿತರನ್ನು ರಂಜಿಸಿದ್ದಾರೆ.

ಮಳವಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ಡಾ.ಕೆ.ಅನ್ನದಾನಿ ಕೋವಿಡ್ ಸೆಂಟರ್‌ನಲ್ಲಿ ಹಾಡು ಹೇಳಿ, ನೃತ್ಯ ಮಾಡಿ‌ ಸೋಂಕಿತರಿಗೆ ಮನರಂಜನೆ ನೀಡಿದ್ದಾರೆ.

ಮಳವಳ್ಳಿ ಪಟ್ಟಣದ ಕೆಎಸ್‌ಆರ್‌ಟಿಸಿ ತರಬೇತಿ‌ ಕೇಂದ್ರದಲ್ಲಿ ಸ್ಥಾಪಿಸಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ಡಾ.ಕೆ.ಅನ್ನದಾನಿ ಮಾಸ್ಕ್ ಧರಿಸಿಕೊಂಡು ಹಾಡಿ ನೃತ್ಯ ಮಾಡಿ ರಂಜಿಸಿ ಸೋಂಕಿತರ ಯೋಗ ಕ್ಷೇಮ‌ ವಿಚಾರಿಸಿ ಬೇಗನೆ ಗುಣಮುಖರಾಗುವಂತೆ ಹಾರೈಸಿದ್ದಾರೆ‌.

ಶಾಸಕರ ಈ ಕಾರ್ಯಕ್ಕೆ ಸೋಂಕಿತರು‌ ಮೆಚ್ಚುಗೆ ವ್ಯಕ್ತಪಡಿಸುವುದರ ಜತೆಗೆ ಶಾಸಕರ ನೃತ್ಯಕ್ಕೆ ಶಿಳ್ಳೆ ಹಾಕುತ್ತಾ ಜೈಕಾರ ಕೂಗಿ ಮತ್ತಷ್ಟು ಹುರಿದುಂಬಿಸಿದ್ದಾರೆ. ಶಾಸಕರ ನೃತ್ಯ ಕಂಡು ಸೋಂಕಿತರೂ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net