5,501 ವಿದ್ಯಾರ್ಥಿನಿಯರಿಗೆ "ಮಲಬಾರ್​' ಸ್ಕಾಲರ್​ಶಿಪ್​: ಸಿಎಸ್​ಆರ್​ ಅಡಿ ನೀಡಿಕೆ

DKS
Published on

ಬೆಂಗಳೂರು: ಮಲಬಾರ್​ ಗೋಲ್ಡ್​ ಆ್ಯಂಡ್​ ಡೈಮಂಡ್ಸ್​ನ ಪೋಷಕ ಸಂಸ್ಥೆಯಾಗಿರುವ ಮಲಬಾರ್​ ಗ್ರೂಪ್​, 2024-25ನೇ ಸಾಲಿನಲ್ಲಿ ರಾಜ್ಯದ 5,501 ವಿದ್ಯಾರ್ಥಿನಿಯರಿಗೆ ಸ್ಕಾಲರ್​ಶಿಪ್​ ವಿತರಿಸಿದೆ.

ನಗರದ ಹೋಟೆಲ್​ನಲ್ಲಿ ಗುರುವಾರ ಆಯೋಜಿಸಿದ್ದಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್​, ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಪಿಯುಸಿ ಮತ್ತು ಪದವಿ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ವಿತರಿಸಿದರು. ಸಂಸ್ಥೆಯು ತನ್ನ ಕಾಪೋರ್ರೇಟ್​ ಸಾಮಾಜಿಕ ಜವಾಬ್ದಾರಿ (ಸಿಎಸ್​ಆರ್​) ಅಡಿ ಪ್ರಸಕ್ತ ವರ್ಷದಲ್ಲಿ ದೇಶಾದ್ಯಂತ ವಿದ್ಯಾರ್ಥಿವೇತನ ಕಾರ್ಯಕ್ರಮಕ್ಕಾಗಿ 16 ಕೋಟಿ ರೂ. ಮೀಸಲಿಟ್ಟಿದೆ. ಈ ಹಣವನ್ನು 21 ಸಾವಿರಕ್ಕೂ ಅಧಿಕ ಹೆಣ್ಣುಮಕ್ಕಳಿಗೆ ವಿತರಣೆ ಮಾಡಿದೆ. ಕರ್ನಾಟಕದ 491 ಕಾಲೇಜುಗಳಿಂದ 5,501 ಹೆಣ್ಣುಮಕ್ಕಳ ವ್ಯಾಸಂಗಕ್ಕೆ ನೆರವಾಗುವ ದೃಷ್ಟಿಯಿಂದ 4.74 ಕೋಟಿ ರೂ. ನೀಡಿದೆ.

ಮಲಬಾರ್​ ಗ್ರೂಪ್​ ಅಧ್ಯಕ್ಷ ಎಂ.ಪಿ. ಅಹಮ್ಮದ್​ ಮಾತನಾಡಿ, ಜಗತ್ತಿನ ಬದಲಾವಣೆಗೆ ಶಿಕ್ಷಣ ಅತ್ಯಂತ ಶಕ್ತಿಶಾಲಿ ಸಾಧನ. ಹೆಣ್ಣುಮಕ್ಕಳ ಶೈಕ್ಷಣಿಕ ಆಕಾಂಕ್ಷೆ ಪೂರೈಸಲು ಮತ್ತು ಅವರು ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡುವ ನಿಟ್ಟಿನಲ್ಲಿ 1999ರಿಂದ ಮಲಬಾರ್​ ಚಾರಿಟಬಲ್​ ಟ್ರಸ್ಟ್​ ಆರಂಭಿಸಲಾಗಿದೆ. ಸಂಸ್ಥೆಯ ಒಟ್ಟು ಆದಾಯದಲ್ಲಿ ಶೇ.5 ಮೊತ್ತವನ್ನು ಸಿಎಸ್​ಆರ್​ ಚಟುವಟಿಕೆಗಳಿಗೆ ಮೀಸಲಿಡಲಾಗಿದೆ. ಇದರ ಅಡಿ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಶಿಕ್ಷಣ, ಆರೋಗ್ಯ, ರಕ್ಷಣೆ, ಪರಿಸರ ಮತ್ತು ಬಡತನ ನಿಮೂರ್ಲನೆಗೆ ನಮ್ಮ ಸಂಸ್ಥೆ ಹೆಚ್ಚಿನ ಒತ್ತು ನೀಡಿದೆ ಎಂದು ತಿಳಿಸಿದರು.

ಮಲಬಾರ್​ ಗ್ರೂಪ್​ನ ಕರ್ನಾಟಕದ ಪ್ರಾದೇಶಿಕ ಮುಖ್ಯಸ್ಥ ಬಿ.ಪಿ. ಫಿಲ್ಸರ್​ ಬಾಬು ಸೇರಿ ಆಡಳಿತ ಮಂಡಳಿ ಸದಸ್ಯರು, ಗ್ರಾಹಕರಿದ್ದರು.

ಸರ್ಕಾರದಿಂದ ಸಹಕಾರ: ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಮಲಬಾರ್​ ಗ್ರೂಪ್​ಗೆ ಸರ್ಕಾರದ ಸಹಕಾರ ಸದಾ ಇರಲಿದೆ. ಈ ಸಂಸ್ಥೆಯವರು ಶಿಣದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಲಾಂತರ ಬಡ ಹೆಣ್ಣುಮಕ್ಕಳಿಗೆ ಉಚಿತವಾಗಿ ವಿದ್ಯಾರ್ಥಿವೇತನ ನೀಡುತ್ತ ಬರುತ್ತಿರುವುದು ವಿಶೇಷವಾದದ್ದು ಎಂದು ಡಿ.ಕೆ. ಶಿವಕುಮಾರ್​ ಮೆಚ್ಚುಗೆ ವ್ಯಕ್ತಪಡಿಸಿದರು. ನನ್ನ ಕ್ಷೇತ್ರದಲ್ಲಿ ಪ್ರತಿ ವರ್ಷ ಇಂತಹ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇನೆ. ವಿದ್ಯೆಯನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ವಿದ್ಯಾರ್ಥಿವೇತನ ಪಡೆದ ಹೆಣ್ಣುಮಕ್ಕಳು ಉನ್ನತ ಶಿಕ್ಷಣ ಪಡೆಯುವಂತಾಗಬೇಕು ಎಂದರು.

ಅಂತಿಮ ವರ್ಷದ ಪದವಿ ಇದ್ದಾಗ ನನಗೆ ಕಾಂಗ್ರೆಸ್​ ಟಿಕೆಟ್​ ನೀಡಿತ್ತು. 9 ಬಾರಿ ವಿಧಾನಸಭಾ ಚುನಾವಣೆ ಎದುರಿಸಿದ್ದೇನೆ. ನಾನು ಶಿಣಕ್ಕೆ ಹೆಚ್ಚು ಒತ್ತು ಕೊಟ್ಟಿಲ್ಲ. ಆದರೆ, ನನ್ನ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿದ್ದೇನೆ. ನನ್ನ ಪತ್ನಿ ಸಹ ಮಕ್ಕಳ ಶಿಣದ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದಳು. ನಾನು 29 ವರ್ಷಕ್ಕೆ ಮಂತ್ರಿಯಾದೆ. ಮೈಸೂರಿನ ಮುಕ್ತ ವಿಶ್ವವಿದ್ಯಾಲಯದಲ್ಲಿ 46ನೇ ವರ್ಷಕ್ಕೆ ಪದವೀಧರ ಆದೆ. ಆ ದಿನದಂದು ನಾನು ತುಂಬ ಖುಷಿಪಟ್ಟಿದ್ದೆ.

| ಡಿ.ಕೆ. ಶಿವಕುಮಾರ್​, ಡಿಸಿಎಂ

ಅಜ್ಜಿ ಮನೆ ಯೋಜನೆಯಡಿ ನಿರ್ಗತಿಕರಿಗೆ ಉಚಿತವಾಗಿ ಮನೆ ಕಟ್ಟಿಸಿಕೊಡುತ್ತಿದ್ದೇವೆ. ಶಾಲಾ ಬಿಟ್ಟ ಮಕ್ಕಳಿಗಾಗಿ 12 ರಾಜ್ಯಗಳಲ್ಲಿ ಮೈಕ್ರೋ ಲರ್ನಿಂಗ್​ ಸೆಂಟರ್​ ಮೂಲಕ ಉಚಿತ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಹಸಿವು ಮುಕ್ತ ಯೋಜನೆಯಡಿ ಪ್ರತಿ ನಿತ್ಯ 60 ಸಾವಿರಕ್ಕೂ ಅಧಿಕ ಆಹಾರ ಪೊಟ್ಟಣ ವಿತರಿಸಲಾಗುತ್ತಿದೆ. ಸಿಎಸ್​ಆರ್​ ಅಡಿ ಈವರೆಗೆ 282 ಕೋಟಿ ರೂ. ವಿನಿಯೋಗಿಸಿದ್ದೇವೆ.

| ಅಷರ್​ ಓ, ಮಲಬಾರ್​ ಗ್ರೂಪ್​ನ ಇಂಡಿಯಾ ಕಾರ್ಯಚರಣೆಗಳ ಎಂಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net